ಪ್ರಮುಖ ಸುದ್ದಿ

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ : ಸಾರಿಗೆ ಸಚಿವ ತಮಣ್ಣ

ರಾಜ್ಯ(ಕೋಲಾರ)ಜು.17:- ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸಾರಿಗೆ ವ್ಯಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮಣ್ಣ ಹೇಳಿದ್ದಾರೆ.

ಕೋಲಾರದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕೆಲವೊಂದು ರಾಜ್ಯಗಳಲ್ಲಿ ನಮ್ಮ ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳು ಸಂಚರಿಸಲು ಅಗುತ್ತಿಲ್ಲ ಇವೆಲ್ಲವನ್ನು ಸರಿಮಾಡುವ ನಿಟ್ಟಿನಲ್ಲಿ ಕಾಯ್ದೆ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ ತಿದ್ದುಪಡಿ ಮಾಡಿ ಕಾರ್ಯಗತ ಮಾಡಲಾಗುವುದು ಎಂದರು. ಇದಕ್ಕೂ ಮೊದಲು ಶ್ರೀನಿವಾಸಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಅಗತ್ಯ ಇರುವಂತಹ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಇಂದು ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ  ನೂತನ ಬಸ್ ನಿಲ್ದಾಣ ವೀಕ್ಷಿಸಿದರು. ನಂತರ ಅಗತ್ಯವಾಗಿರುವ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ  ಮತ್ತು ಸಾರಿಗೆ ಸಂಸ್ಥೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಾರಿಗೆ ಸಂಸ್ಥೆ ನೌಕರರೊಂದಿಗೆ ಸಂವಾದ ನಡೆಸಿದಾಗ ನೌಕರರ ಅನುಕೂಲಕ್ಕೆ ವಸತಿ ನಿಲಯ ಹಾಗೂ ಕ್ಯಾಂಟೀನ್ ಸೌಲಭ್ಯ ವ್ಯವಸ್ಥೆ ಮಾಡಿಸುವಂತೆ ನೌಕರರು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಸಚಿವರು ಆದ್ಯತೆ ಮೇಲೆ ವ್ಯವಸ್ಥೆ ಮಾಡಲಾಗುವುದು ಎಂದರು. ಬಸ್ ನಿಲ್ದಾಣದ ಹಿಂಭಾಗದಲ್ಲಿ ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಕಟ್ಟಡದ ಕಾಮಗಾರಿ ಪೂರ್ತಿ ಮಾಡಿ ಸರ್ಕಾರಿ ಕಚೇರಿಗಳಿಗೆ ಬಾಡಿಗೆ ನೀಡುವ ಮೂಲಕ ಸಂಸ್ಥೆಗೆ ಆದಾಯ ತರುವ ಬಗ್ಗೆ ಯೋಜನೆ ರೂಪಿಸುವಂತೆ ಸೂಚಿಸಿದರು.

ಮಾನವೀಯತೆ ಇರುವವರು ಭಾವುಕರಾಗುವುದು ಸಹಜ

ಕುಮಾರಸ್ವಾಮಿಯವರು ಕಣ್ಣೀರಿಟ್ಟ ಕುರಿತು ಪ್ರತಿಕ್ರಿಯಿಸಿ ಮಾನವೀಯತೆ ಇರುವವರು ಭಾವುಕರಾಗುವುದು ಸಹಜ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಕೆಲಸದ ಒತ್ತಡ. ಕೆಲಸ ಕೆಲವೊಮ್ಮೆ ಕಾರ್ಯಗತವಾಗಲಿಲ್ಲ ಎಂದಾಗ ಹಾಗೆ ದಕ್ಷತೆಯಿಂದ ಕಾರ್ಯಕ್ರಮ ರೂಪಿಸುವಾಗ ಟೀಕೆಗಳು ಬಂದಾಗ ನೋವಾಗುತ್ತದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: