ದೇಶವಿದೇಶ

ಸೌದಿಯಲ್ಲಿ ತೆರಿಗೆ ಭಾರ: ತವರಿಗೆ ಬಂದು ಉದ್ಯೋಗ ಹುಡುಕುತ್ತಿರುವ ಕರಾವಳಿ ಕನ್ನಡಿಗರು

ಮಂಗಳೂರು (ಜುಲೈ 17): ಸೌದಿ ಅರೇಬಿಯಾದಲ್ಲಿ ಶುಲ್ಕದ ಹೊರೆಯನ್ನು ಹೊರಲಾಗದೆ ಎನ್‌ಆರ್‌ಐಗಳು ತಮ್ಮ ಕುಟುಂಬದ ಸದಸ್ಯರನ್ನು ತವರಿಗೆ ಕಳುಹಿಸುತ್ತಿದ್ದಾರೆ ಅಥವಾ ಖುದ್ದು ತಾವೇ ಉದ್ಯೋಗವನ್ನು ತೊರೆದು ವಾಪಸ್ ಆಗುತ್ತಿದ್ದಾರೆ. ಇದು ಒಂದು ಸಮಸ್ಯೆಯಾದರೆ, ಮತ್ತೊಂದೆಡೆ, ಈ ರೀತಿ ಉದ್ಯೋಗವನ್ನೇ ತೊರೆದು ಆಗಮಿಸಿರುವ ಯುವಕರು ತಮ್ಮ ತಾಯ್ನೋಡಿನಲ್ಲಿ ಅರ್ಹ ಉದ್ಯೋಗಕ್ಕಾಗಿ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.

2017ರ ಜುಲೈನಿಂದ ವಲಸಿಗರ ಅವಲಂಬಿತರ ಮೇಲೆ ಭಾರೀ ಪ್ರಮಾಣದ ಶುಲ್ಕವನ್ನು ವಿಧಿಸಿರುವುದರಿಂದ ಅಲ್ಲಿರುವ ದೊಡ್ಡ ಸಂಖ್ಯೆಯ ಕರಾವಳಿ ಕರ್ನಾಟಕದ ಅನಿವಾಸಿ ಭಾರತೀಯರ ಪರಿಣಾಮ ಬೀರಿದೆ.

ಉಡುಪಿಯ ನಿವಾಸಿಯೊಬ್ಬರು ಕಳೆದ 20 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಮೆಕ್ಯಾನಿಕಲ್ ಸುಪರ್ವೈಸರ್ ಆಗಿ ಕೆಲಸಕ್ಕಿದ್ದವರು. ಅಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ಕೆಲ ವರ್ಷಗಳ ಹಿಂದೆ ತಮ್ಮ ಪತ್ನಿ, ಮಕ್ಕಳನ್ನೂ ಅಲ್ಲಿಗೆ ಕರೆಸಿಕೊಂಡವರು. ಕೆಲ ತಿಂಗಳ ಹಿಂದೆ ಅವರು ತಮ್ಮ ಪತ್ನಿ ಹಾಗೂ ನಾಲ್ವರು ಮಕ್ಕಳನ್ನೂ ತವರಿಗೆ ಕಳುಹಿಸಿದ್ದಾರೆ. ಕಾರಣ ಸೌದಿಯಲ್ಲಿ ಇಕಾಮ (ನಿವಾಸ ಪರವಾನಿಗೆ)ಕ್ಕೆ ಸಂಬಂ ಧಿಸಿದ ಅವಲಂಬಿತರ ಶುಲ್ಕವಾಗಿ ಮುಹಮ್ಮದ್ ನವಾಝ್ರವರು ನಾಲ್ವರು ಮಕ್ಕಳು ಹಾಗೂ ಪತ್ನಿ ಸೇರಿ ಐದು ಮಂದಿಗೆ ತಿಂಗಳೊಂದಕ್ಕೆ ತಲಾ 500 ಸೌದಿ ರಿಯಾಲ್‌ಗಳನ್ನು (ತಲಾ ಸುಮಾರು 9,146 ರೂ.) ಪಾವತಿಸಬೇಕು.

ಜಾಗತಿಕವಾಗಿ ತೈಲ ಬೆಲೆಯಲ್ಲಿ ಕುಸಿತದಿಂದಾಗಿ ಕುಸಿಯುತ್ತಿರುವ ದೇಶದ ಆದಾಯವನ್ನು ಮೇಲೆತ್ತುವ ಸಲುವಾಗಿ ಸೌದಿ ಅರೇಬಿಯಾ ಕಳೆದ ವರ್ಷದಿಂದ ಅಂದರೆ 2017ರಿಂದ ಸೌದಿಯಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳ ಅವಲಂಬಿತರ (ಪತ್ನಿ ಮಕ್ಕಳು ಅಥವಾ ಇತರರು) ಮೇಲೆ ಶುಲ್ಕ ಹೇರಲು ಆರಂಭಿಸಿದೆ.

ಮೂಲಗಳ ಪ್ರಕಾರ ಸೌದಿ ಅರೇಬಿಯಾವು 2017ರಿಂದ (ಪ್ರತಿ ತಿಂಗಳಿಗೆ ಒಬ್ಬರಿಗೆ ತಲಾ 100 ಸೌದಿ ರಿಯಲ್) ಸುಮಾರು 1,800 ರೂ.)ನಂತೆ ಈ ಶುಲ್ಕವನ್ನು ವಿಧಿಸಿದೆ. ಸದ್ಯ 2020ರವರೆಗೆ ಈ ಶುಲ್ಕ ಮುಂದುವರಿಯಲಿದ್ದು, ವರ್ಷದಿಂದ ವರ್ಷಕ್ಕೆ ಈ ಶುಲ್ಕ ದುಪ್ಪಟ್ಟುಗೊಳ್ಳಲಿದೆ. ಅಂದರೆ, 2018ರಲ್ಲಿ ಒಬ್ಬರಿಗೆ ತಲಾ 200 ಸೌದಿ ರಿಯಲ್‌ನಂತೆ ಈ ಶುಲ್ಕ ವನ್ನು ಸೌದಿ ವಲಸಿಗರು ಪಾವತಿಸಬೇಕಾಗುತ್ತದೆ. 2019ಕ್ಕೆ 300 ಹಾಗೂ 2020ಕ್ಕೆ ತಿಂಗಳಿಗೆ ತಲಾ 400 ರಿಯಲ್‌ಗಳಂತೆ ಈ ಶುಲ್ಕ ಪಾವತಿಸಬೇಕಾಗುತ್ತದೆ.

ದಕ್ಷಿಣ ಕನ್ನಡ, ಉಡುಪಿ, ಭಟ್ಕಳ ಸೇರಿದಂತೆ ಕರಾವಳಿ ಕರ್ನಾಟಕದ ದೊಡ್ಡ ಸಂಖ್ಯೆಯ ಕುಟುಂಬಗಳು ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಿಗಳಾಗಿ ಬದುಕು ಕಟ್ಟಿ ಕೊಂಡಿ ದ್ದಾರೆ. ಹಾಗೆ ಉದ್ಯೋಗ ಪಡೆದ ಯುವಕರಲ್ಲಿ ಬಹಳಷ್ಟು ಮಂದಿ ಅಲ್ಲಿಗೆ ತಮ್ಮ ಕುಟುಂಬವನ್ನು ಕರೆಸಿ ನೆಲೆ ನಿಂತಿದ್ದಾರೆ. ಆದರೆ ಈ ವಲಸಿಗರ ಅವಲಂಬಿತರ ಮೇಲಿನ ಶುಲ್ಕ ಉದ್ಯೋಗಕ್ಕಾಗಿ ಕುಟುಂಬದೊಂದಿಗೆ ನೆಲೆಸಿದವರನ್ನು ಕಂಗೆಡಿಸಿದೆ. (ಎನ್.ಬಿ)

Leave a Reply

comments

Related Articles

error: