ಕ್ರೀಡೆವಿದೇಶ

ಫಿಫಾ ವಿಶ್ವಕಪ್ ನಿಂದ ಬಂದ 66 ಲಕ್ಷ ರೂ. ಸಂಭಾವನೆಯನ್ನು ಚಾರಿಟಿಗೆ ನೀಡಿದ ಕೈಲಿಯನ್ ಬಾಪೆ

ಪ್ಯಾರಿಸ್,ಜು.17-ಫಿಫಾ ವಿಶ್ವಕಪ್ ನಲ್ಲಿ ಯುವ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಫ್ರಾನ್ಸ್ ಆಟಗಾರ ಕೈಲಿಯನ್ ಬಾಪೆ ವಿಶ್ವಕಪ್ ಪಂದ್ಯಗಳಿಂದ ಬಂದ 66 ಲಕ್ಷ ರೂ. ಸಂಭಾವನೆಯನ್ನು ದತ್ತಿ ಕಾರ್ಯಗಳಿಗೆ ನೀಡಿದ್ದಾರೆ.

ವಿಶ್ವಕಪ್ ಪಂದ್ಯಾವಳಿಯ ಪ್ರತಿ ಪಂದ್ಯಕ್ಕೆ ಬಾಪೆ 22,500 ಡಾಲರ್ ಅಥವಾ 3 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು. ಇದರ ಜತೆಗೆ ಟೂರ್ನಿ ಗೆದ್ದ ಕಾರಣಕ್ಕೆ 3.5 ಲಕ್ಷ ಡಾಲರ್ ಅಂದರೆ 46 ಲಕ್ಷ ರೂ. ಬೋನಸ್ ಪಡೆದಿದ್ದರು. ಈ ಹಣವನ್ನು ಆಸ್ಪತ್ರೆಗೆ ದಾಖಲಾದ ಮಕ್ಕಳಿಗೆ ಅಥವಾ ಕ್ರೀಡೆಗಳ ಸಂದರ್ಭದಲ್ಲಿ ಅಂಗವೈಕಲ್ಯಕ್ಕೆ ಒಳಗಾದವರ ನೆರವಿಗೆ ವೆಚ್ಚ ಮಾಡಲಾಗುವುದು ಎಂದು ಬಾಪೆ ಹೇಳಿದ್ದಾರೆ.

ಬಾಪೆ ಒಬ್ಬ ಶ್ರೇಷ್ಠ ವ್ಯಕ್ತಿ. ಅವರಿಗೆ ಬಿಡುವು ಇದ್ದಾಗಲೆಲ್ಲ ನಮ್ಮ ಜತೆ ಸಂತಸ ಹಂಚಿಕೊಳ್ಳುತ್ತಿದ್ದರು. ಮಕ್ಕಳ ಜತೆ ಅತೀವ ಪ್ರೀತಿ ಹೊಂದಿರುವ ಬಾಪೆ ಸದಾ ಅವರಿಗೆ ಸ್ಫೂರ್ತಿ ಎಂದು ದತ್ತಿಯ ಪ್ರಧಾನ ವ್ಯವಸ್ಥಾಪಕ ಸೆಬಾಸ್ಟಿಯನ್ ರುಫಿನ್ ಹೇಳಿದ್ದಾರೆ.

ವಿಶ್ವಕಪ್ ಫೈನಲ್‌ನಲ್ಲಿ ಗೋಲು ಗಳಿಸಿದ ಎರಡನೇ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿರುವ ಬಾಪೆ ಟೂರ್ನಿಯಲ್ಲಿ ನಾಲ್ಕು ಗೋಲು ಗಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: