ಪ್ರಮುಖ ಸುದ್ದಿಮನರಂಜನೆ

ಫೋರ್ಬ್ಸ್ ಪಟ್ಟಿಯಲ್ಲಿ 76ನೇ ಸ್ಥಾನದಲ್ಲಿರುವ ಅಕ್ಷಯ್ ಕುಮಾರ್ : ಪಟ್ಟಿಯಿಂದ ಹೊರಬಿದ್ದ ನಟ ಶಾರೂಖ್

ದೇಶ(ನವದೆಹಲಿ)ಜು.17:- ಫೋರ್ಬ್ಸ್ ನಿಯತಕಾಲಿಕೆ ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಬಿಡುಗಡೆಗೊಳಿಸಿದ್ದು, ಅದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ 76ನೇ ಸ್ಥಾನದಲ್ಲಿದ್ದಾರಂತೆ.

ಬಾಲಿವುಡ್ ನ ಎಲ್ಲಾ ‘ಖಾನ್’ ರನ್ನುಹಿಂದಿಕ್ಕಿದ ಅಕ್ಷಯ್ ಕುಮಾರ್ ಭಾರತೀಯ ಸೆಲೆಬ್ರಿಟಿಗಳಲ್ಲಿಯೇ ಮೇಲಿದ್ದಾರಂತೆ.ನಟ ಸಲ್ಮಾನ್ ಖಾನ್ ಕೂಡ ಹಿಂದೆ ಬಿದ್ದಿದ್ದಾರೆ. ಆದರೆ ಆಶ್ಚರ್ಯಗೊಳಿಸುವ ವಿಷಯವೇನೆಂದರೆ ಲಿಸ್ಟ್ ನಲ್ಲಿ ಪ್ರತಿವರ್ಷವೂ ತನ್ನ ಹೆಸರನ್ನು ದಾಖಲಿಸಿಕೊಳ್ಳುತ್ತಿದ್ದ ನಟ ಶಾರೂಖ್ ಖಾನ್ ಈ ಬಾರಿ ಪಟ್ಟಿಯಿಂದ ಹೊರಬಿದ್ದಿದ್ದಾರಂತೆ. ಲಿಸ್ಟ್ ನಲ್ಲಿ ಅಮೇರಿಕದ ಬಾಕ್ಸರ್ ಫ್ಲಾಯ್ಡ್ ಮೇವೆದರ್ 28.5ಕೋಟಿ ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಮೊದಲನೇ ಸ್ಥಾನದಲ್ಲಿದ್ದಾರಂತೆ.

ಅಕ್ಷಯ್ ಕುಮಾರ್ ಗೆ 76ನೇ ಸ್ಥಾನ, ಸಲ್ಮಾನ್ ಖಾನ್ ಗೆ 82ನೇ ಸ್ಥಾನ ಲಭಿಸಿದೆ ಎಂದು ನ್ಯೂಸ್ ಏಜೆನ್ಸಿಯೊಂದು ವರದಿ ಮಾಡಿದೆ. (ಎಸ್.ಎಚ್)

Leave a Reply

comments

Related Articles

error: