ಪ್ರಮುಖ ಸುದ್ದಿಮೈಸೂರು

ನಂಜನಗೂಡು ರೈಲ್ವೆ ಮಾದರಿಯ ಶಾಲೆಗೆ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಶ್ಲಾಘನೆ

ಮೈಸೂರು,ಜು.17:- ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಶಿಕ್ಷಕರು ತಂತ್ರ ರೂಪಿಸಿದ್ದು, ಸರ್ಕಾರಿ ಶಾಲೆಗೆ ವಿಶೇಷ ಬಗೆಯ ರೈಲು ಬಂದಿದೆ. ನಿಜವಾದ ರೈಲನ್ನು ನಾಚಿಸುವಷ್ಟರ ಮಟ್ಟಿಗೆ ಸಿದ್ಧಗೊಂಡಿದ್ದು, ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಾರೋಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಶಾಲೆಯನ್ನು ಟ್ರೈನ್ ರೀತಿ ಸಜ್ಜುಗೊಳಿಸಿದ್ದಾರೆ ಎಂಬ ಸುದ್ದಿಯ ಜೊತೆ ಶಾಲೆಯಲ್ಲಿ ರೈಲಿನ ಮಾದರಿಯ ಚಿತ್ರ  ಕಳೆದ ವಾರ ಸಾಕಷ್ಟು ಸುದ್ದಿ ಮಾಡಿತ್ತು. ಈ ಶಾಲೆಗೆ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ‘ರೈಲ್ವೆ ಬೋಗಿಯಂತೆ ಸರ್ಕಾರಿ ಶಾಲೆಗೆ ಬಣ್ಣ ಬಳಿದಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ಮಕ್ಕಳು ಶಾಲೆ ಬಿಡುವುದು ಕಡಿಮೆಯಾಗುತ್ತದೆಯಲ್ಲದೇ, ಪ್ರತಿನಿತ್ಯ ಮಕ್ಕಳು ಶಾಲೆಗೆ ಉತ್ಸಾಹದಿಂದ ಬರುತ್ತಾರೆ’ ಎಂದು ಬರೆದಿದ್ದಾರೆ.

ಈ ಮಾದರಿ ಟ್ರೈನ್ ಸ್ಕೂಲ್ ನಲ್ಲಿ, ರೈಲು ನಿಂತಲ್ಲೇ ನಿಂತರೂ ನಿತ್ಯ 55 ಪ್ರಯಾಣಿಕರ ಪಯಣ ನಡೆಯುತ್ತಲೇ ಇದೆ. ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಶಿಕ್ಷಕರು ತಂತ್ರ ರೂಪಿಸಿದ್ದು, ಮೂರು ಕೊಠಡಿಯ ಕಟ್ಟಡವನ್ನು ಇಂಜಿನ್, ಎರಡು ಬೋಗಿಗಳ ಟ್ರೈನ್ ಮಾದರಿ ಪೈಂಟಿಂಗ್ ಮಾಡಿದ್ದಾರೆ. ಟ್ರೈನ್ ಸ್ಕೂಲ್ ನಲ್ಲಿ ಟೀಚರ್ ಗಳೇ ಟಿಟಿಗಳಾಗಿದ್ದು, ಮುಖ್ಯೋಪಾಧ್ಯಯರೇ ಸ್ಟೇಷನ್ ಮಾಸ್ಟರ್ ಆಗಿದ್ದಾರೆ. ಹಳ್ಳಿಗಾಡಿನ‌ ಸರ್ಕಾರಿ‌ ಶಾಲೆ ಇದೀಗ ಟ್ರೈನ್ ಬಣ್ಣ ಹಾಕಿಕೊಂಡು ರಾಜ್ಯ ಮಟ್ಟದಲ್ಲಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲೂ  ಸುದ್ದಿಯಾಗಿರುವುದು ವಿಶೇಷವೇ ಸರಿ. (ಎಸ್.ಎಚ್)

Leave a Reply

comments

Related Articles

error: