ಮೈಸೂರು

ಜಯಚಾಮರಾಜೇಂದ್ರ ಒಡೆಯರ್ 100ನೇ ಜನ್ಮ ದಿನಾಚರಣೆ : ಸಂಗೀತ ಕಛೇರಿ

ಮೈಸೂರು,ಜು.17 : ಗೋಕುಲಂನ ಶ್ರೀಕೃಷ್ಣ ಗಾನಸಭಾದಿಂದ ಶ್ರೀಜಯಚಾಮರಾಜ ಒಡೆಯರ್ ಅವರ ಶತಾಬ್ದಿ ಜನ್ಮ ದಿನಾಚರಣೆ ಅಂಗವಾಗಿ ಜು. 18, 21 ಮತ್ತು 22ರಂದು ಮೂರು ದಿನಗಳ ಕಾಲ ಸಂಜೆ 6 ಗಂಟೆಗೆ ವಿಶೇಷ ಸಂಗೀತ ಕಛೇರಿಯನ್ನು ಹಮ್ಮಿಕೊಳ್ಳಲಾಗಿದೆ.

ಜು.18ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ.ರಾ.ಸ.ನಂದಕುಮಾರ್ ಇರುವರು. ಕೃಷ್ಣಗಾನಸಭಾ ಅಧ್ಯಕ್ಷ ಬಿ.ಎಸ್.ಧನರಾಜೇ ಅರಸ್ ಅಧ್ಯಕ್ಷತೆ ವಹಿಸುವರು. ನಂತರ ವಿದುಷಿ ಡಾ.ಸುಕನ್ಯ ಪ್ರಭಾಕರ್ ಅವರಿಂದ ‘ವಂದೇಹಂ ಶಿವೆ’ ನೃತ್ಯ ರೂಪಕ ಪ್ರಸ್ತುತ ಪಡಿಸುವರು.

ಜು.21ರಂದು ವಿದ್ವಾನ್ ಎಂ.ಎಸ್.ಭಾಸ್ಕರ್, ಜು.22ರಂದು ವಿದುಷಿ ಅಂಬುಜವಲ್ಲಿ ಅವರುಗಳು ಸಂಗೀತ ಕಛೇರಿ ನಡೆಸಿಕೊಡುವರು. (ಕೆ.ಎಂ.ಆರ್)

Leave a Reply

comments

Related Articles

error: