
ಮೈಸೂರು
ಅತಿಕ್ ಅಹಮದ್ ಇಸ್ಲಾಂಗೆ ಚಿನ್ನದ ಪದಕ
ಮೈಸೂರು ವಿವಿಯ ಘಟಿಕೋತ್ಸವವು ಕಳೆದ ಡಿ.13ರಂದು ಕ್ರಾಫರ್ಡ್ ಭವನದಲ್ಲಿ ನಡೆದಿದ್ದು ಅಂದು ಅತಿಕ್ ಅಹಮದ್ ಇಸ್ಲಾಂ ಅವರಿಗೆ ಎಂಡೋಮೆಂಟ್, ಮೌಲಾನಾ ಸೈಯದ್ ರಿಯಾಜುದ್ದೀನ್ ಅಲಿ ಹಾಗೂ ಎಂ.ವಲ್ಲಿಯುಲ್ಲಾ ಮೊಮೋರಿಯಲ್ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಉಪಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಹಾಗೂ ನೈಸರ್ಗಿಕ ವಿಜ್ಞಾನ ವಿಭಾಗದ ಪ್ರೊ.ಕೆ.ಎನ್.ತಿಮ್ಮಯ್ಯ ಉಪಸ್ಥಿತರಿದ್ದರು.