ಸುದ್ದಿ ಸಂಕ್ಷಿಪ್ತ

ಉಚಿತ ಪರೀಕ್ಷಾ ಪೂರ್ವ ತರಬೇತಿ

ಮಂಡ್ಯ (ಜುಲೈ 18): ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸ್ಟಡಿಸರ್ಕಲ್ ವತಿಯಿಂದ ಜುಲೈ 19 ರಿಂದ ಜುಲೈ 31ರ ವರೆಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇರುವ ಕಾನ್ಸ್‍ಟೇಬಲ್ (ನಾಗರೀಕ) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ಪರೀಕ್ಷಾ ಪೂರ್ವ ತರಬೇತಿಯನ್ನು ಏರ್ಪಡಿಸಿದ್ದು, ಅರ್ಜಿ ಸಲ್ಲಿಸಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಿರುವ ಬಗ್ಗೆ ಸ್ವೀಕೃತಿ/ದಾಖಲೆ ಮತ್ತು ಉದ್ಯೋಗ ವಿನಿಮಯ ಕಚೇರಿ ನೊಂದಣಿ ದಾಖಲೆಯೊಂದಿಗೆ ಕಚೇರಿಗೆ ಬಂದು ತರಬೇತಿಗೆ ಹೆಸರು ನೊಂದಾಯಿಸಿ ಕೊಂಡು ಸದುಪಯೋಗಪಡಿಸಿಕೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08232 220126 ನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: