ಸುದ್ದಿ ಸಂಕ್ಷಿಪ್ತ

ಬೆಂಗಳೂರಿನಲ್ಲಿ ಅಂಚೆ ಅದಾಲತ್

ಬೆಂಗಳೂರು (ಜುಲೈ 18): ಮುಖ್ಯ ಪೋಸ್ಟ್’ಮಾಸ್ಟರ್ ಜನರಲ್, ಕರ್ನಾಟಕ ಅಂಚೆ ವಲಯ, ನಂ.1, ಅರಮನೆ ರಸ್ತೆ (ಮಹಾರಾಣಿ ವಿಜ್ಞಾನ ಕಾಲೇಜಿನ ಎದುರು) ಬೆಂಗಳೂರು – 560 001 ಇವರ ಕಾರ್ಯಾಲಯದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲಾ ವ್ಯಾಪಿಗೆ ಸಂಬಂಧಪಟ್ಟ ಅಂಚೆ ಸೇವೆಗಳ ಕುಂದು ಕೊರತೆಗಳು, ಅಹವಾಲುಗಳನ್ನು ಪರಿಹರಿಸಲು ಅಂಚೆ ಅದಾಲತ್ (ಡಾಕ್ ಅದಾಲತ್) ಅನ್ನು ದಿನಾಂಕ: 20-07-2018 ರಂದು ಮಧ್ಯಾಹ್ನ 3.00 ಗಂಟೆಗೆ ಆಯೋಜಿಸಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಅಂಚೆ ಸೇವೆಗಳ ಕುಂದುಕೊರತೆಗಳನ್ನು ತಮ್ಮ ಸಂಪೂರ್ಣ ಹಾಗೂ ಸಂಪರ್ಕ ವಿಳಾಸಗಳೊಂದಿಗೆ ತ್ವರಿತ ಪರಿಹಾರಕ್ಕಾಗಿ ಈ ಕೆಳಗೆ ನಮೂದಿಸಿರುವ ವಿಳಾಸಕ್ಕೆ ದಿನಾಂಕ: 15-07-2018 ರ ಒಳಗಾಗಿ ತಲುಪುವಂತೆ ಕಳುಹಿಸಿಕೊಡಲು ಕೋರಲಾಗಿದೆ.

ಈ ಕುಂದುಕೊರತೆಗಳನ್ನು ಈಮೇಲ್ ಮುಖಾಂತರವೂ ಸಹ [email protected] ಗೆ ಕಳುಹಿಸಬಹುದಾಗಿದೆ. ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ನಿರ್ದಿಷ್ಟ ಅಂಕಿ ಅಂಶಗಳ ವಿವರಗಳೊಂದಿಗೆ ಸಹಾಯಕ ನಿರ್ದೇಶಕರು (ಪಿ.ಒ) ಮುಖ್ಯ ಪೋಸ್ಟ್‍ಮಾಸ್ಟರ್ ಜನರಲ್‍ರವರ ಕಾರ್ಯಾಲಯ, ಕರ್ನಾಟಕ ಅಂಚೆ ವಲಯ, ಬೆಂಗಳೂರು – 560 001 ಕಳುಹಿಸಲು ಕೋರಲಾಗಿದೆ. ದೂರವಾಣಿ ಸಂಖ್ಯೆ 080-22392631, 22392543 ಅನ್ನು ಸಂಪರ್ಕಿಸಲು ತಿಳಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: