ಮೈಸೂರು

ಯೋಗಭೀಷ್ಮ ಸಂಕಲನ ಲೋಕಾರ್ಪಣೆ : ಶೆಲ್ವಪಿಳ್ಳೈರಿಂದ ಯೋಗ ಗುರುವಿನ ಬಣ್ಣನೆ

ಬಿ.ಕೆ.ಎಸ್ ಅಯ್ಯಂಗಾರ್ ರವರ ಜೀವನದ ಸಂಪೂರ್ಣ ಮಾಹಿತಿಯುಳ್ಳ ‘ಯೋಗಭೀಷ್ಮ’ ಸಂಕಲನವನ್ನುಶುಕ್ರವಾರ ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಸರ್ಕಾರಿ ಶಾಲೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಮೈಸೂರಿನಲ್ಲಿ ಬಿ.ಕೆ ಎಸ್ ಅಯ್ಯಂಗಾರ್ ರವರ 98ನೇ ಜಯಂತಿ ಆಚರಣೆಯಲ್ಲಿ
ಇತಿಹಾಸ ವಿಶ್ಲೇಷಕ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಕೃತಿಯನ್ನು ಲೋಕಾರ್ಪಣೆಗೊಳಿಸಿ, ಕೃತಿಗಳನ್ನು ಶಾಲಾ ಮಕ್ಕಳಿಗೆ ನೀಡಿದರು. ಬಳಿಕ ಮಾತನಾಡಿದ ಅವರು ಚಿಕ್ಕವಯಸ್ಸಿನಲ್ಲಿಯೇ ನೂರಾರು ಖಾಯಿಲೆಯಿಂದ ಬಳಲುತ್ತಿದ್ದ ಪುಟ್ಟಬಾಲಕ ಯೋಗಾಭ್ಯಾಸವನ್ನು ಕರಗತ ಮಾಡಿಕೊಂಡು 9ದಶಕಗಳು ಬದುಕಿ ಜೀವಮಾನ ಸಾಧನೆ ಮಾಡಿದ್ದರು.  ವೈಜ್ಞಾನಿಕ ಲೋಕಕ್ಕೆ ಯೋಗ ಬಹುಮುಖ್ಯವೆಂಬ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿಯೇ ಬಿ.ಕೆ.ಎಸ್ ಅಯ್ಯಂಗಾರ್. ಅದಕ್ಕಾಗಿಯೇ ವಿಶ್ವದ ನೂರು ಪ್ರಭಾವಿ ಶ್ರೇಷ್ಠ ವ್ಯಕ್ತಿಗಳಲ್ಲಿ ಬಿ.ಕೆ.ಎಸ್. ಅಯ್ಯಂಗಾರ್ ಪ್ರಮುಖರು ಎಂದು ಟೈಮ್ಸ್ ಗ್ರೂಪ್ ಪ್ರಕಟಿಸಿತ್ತು. ಯೋಗದ ಮೂಲಕ ಮನಸ್ಸಿನ ಮತ್ತು ದೇಹದ ಸಮತೋಲನ ಆರೋಗ್ಯವಾಗಿರುತ್ತದೆ ಎಂದು ತೋರಿಸಿದ್ದಾರೆ. ರಾಷ್ಟ್ರಪತಿಯಾಗಿದ್ದ ರಾಜೇಂದ್ರಪ್ರಸಾದ್, ಕ್ರಿಕಿಟ್ ದೇವರಾದ ಸಚಿನ್ ತೆಂಡಲ್ಕೂರ್, ಚಿತ್ರರಂಗದ ಸಲ್ಮಾನ್ ಖಾನ್, ಉದ್ಯಮಿ ಕಿರ್ಲೋಸ್ಕರ್, ಸೇರಿದಂತೆ ಸಹಸ್ರಾರು ಪ್ರಮುಖರಿಗೆ ಬಿ.ಕೆ.ಎಸ್ ರವರು ಯೋಗ ಗುರು ಆಗಿದ್ದರು ಎಂದು ತಿಳಿಸಿದರು. ಮನಪಾ ಸದಸ್ಯ ಮಾವಿ.ರಾಂಪ್ರಸಾದ್ ಮಾತನಾಡಿ ವಿಶ್ವ ಯೋಗ ದಿನಾಚರಣೆಯನ್ನು ಎಲ್ಲಾ ದೇಶಗಳೂ ಆಚರಿಸುತ್ತವೆ.  ಅದಕ್ಕೆ ಕಾರಣ ನಮ್ಮ ಭಾರತದ ಯೋಗಗುರುಗಳ ಜೀವಮಾನ ಕೊಡುಗೆ. ಯೋಗವು ಚಿಕ್ಕಮಕ್ಕಳ ಮನಸ್ಸಿನಲ್ಲಿ ಏಕಾಗ್ರತೆಯ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ರಾಜ್ಯಸರ್ಕಾರ ದಿನಕ್ಕೆ ಒಂದು ತರಗತಿಯನ್ನು ಯೋಗಭ್ಯಾಸಕ್ಕಾಗಿ ಮೀಸಲಿಡಬೇಕು  ಎಂದು ಕರೆನೀಡಿದರು,
ಮುಜರಾಯಿ ಇಲಾಖೆಯ ತಹಶೀಲ್ದಾರ್ ಯತಿರಾಜ್, ನಗರ ಪಾಲಿಕೆ ಸದಸ್ಯ ಮಾವಿ ರಾಂಪ್ರಸಾದ್, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ,ಅಪೂರ್ವಸುರೇಶ್   ರಾಘವೇಂದ್ರ ಪ್ರಸಾದ್, ಅನಂತು, ಯೋಗಾ ಪ್ರಕಾಶ್, ರಾಜಗೋಪಾಲ್, ರಂಗನಾಥ್, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು

Leave a Reply

comments

Related Articles

error: