ಮೈಸೂರು

ಶ್ರೀ ಜಯಚಾಮರಾಜೇಂದ್ರ ಒಡೆಯರ್ ಜನ್ಮದಿನೋತ್ಸವ ಆಚರಣೆ

ಮೈಸೂರು,ಜು.18-ಕರ್ನಾಟಕ ರಾಜ್ಯ ಅರಸು ಮಹಾಸಭಾದ ವತಿಯಿಂದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 100ನೇ ಜನ್ಮದಿನೋತ್ಸವವನ್ನು ಬುಧವಾರ ಅರಮನೆ ಆವರಣದಲ್ಲಿ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಅರಮನೆ ಉಳಿಸಿ ಹೋರಾಟ ಸಮಿತಿ ಗೌರವಾಧ್ಯಕ್ಷ ಎಂ.ರಾಮೇಗೌಡ, ಮಹಾರಾಜರ ಸಂಬಂಧಿ ನಾಗಪ್ರನ್ನರಾಜೇಅರಸ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ವಿ.ಸೀತಾರಾಂ, ನಗರಪಾಲಿಕೆ ಮಾಜಿ ಸದಸ್ಯ ರಘುರಾಜೇಅರಸ್, ಅರಸು ಪ್ರತಿಭಾ ಬಳಗದ ಅಧ್ಯಕ್ಷ ಎಂ.ಮಲ್ಲರಾಜೇಅರಸ್ ಇತರರು ಇದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: