ಸುದ್ದಿ ಸಂಕ್ಷಿಪ್ತ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ : ಪರಿಶಿಷ್ಟ-ಜಾತಿ,ಪಂಗಡಗಳಿಗೆ ತರಬೇತಿ ಕಾರ್ಯಾಗಾರ ‘ಡಿ.17’

ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ನಿ, ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ, ಮೈಸೂರು ವಿಭಾಗದ ಎಲ್ಲಾ ಪರಿಶಿಷ್ಟ ಜಾತಿ -ಪಂಗಡಗಳ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ “ಸಹಕಾರ ಸಂಘಗಳ ಮೂಲಕ ದಲಿತರ ಸಬಲೀಕರಣ” ವಿಷಯವಾಗಿ ವಿಶೇಷ ತರಬೇತಿ ಶಿಬಿರವನ್ನು ಡಿ.17ರ ಶನಿವಾರ ಬೆಳಿಗ್ಗೆ 10:30ಕ್ಕೆ ಜೆ.ಎಲ್.ಬಿ.ರಸ್ತೆಯ ಹೋಟೆಲ್ ಮಯೂರ ಹೊಯ್ಸಳದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ಮತ್ತು ಚಾಮರಾಜನಗರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಚಂದ್ರಶೇಖರ್ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: