ಮೈಸೂರು

ಮೈಸೂರು ವಾರಿಯರ್ಸ್‍ನಿಂದ ಕ್ರಿಕೆಟ್ ಪ್ರತಿಭಾನ್ವೇಷಣೆ ಯಶಸ್ವಿ

ಮೈಸೂರು,ಜು.18-ಕರ್ನಾಟಕದ ಗ್ರಾಮೀಣ ಪ್ರದೇಶಗಳ ಹಾಗೂ ಒಳಭಾಗಗಳ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ ತನ್ನ ಬದ್ಧತೆಯ ಭಾಗವಾಗಿ ಮೈಸೂರು ವಾರಿಯರ್ಸ್ ಮಾಲೀಕರಾದ ಎನ್ಆರ್ ಸಮೂಹವು ಇತ್ತೀಚೆಗೆ ಹಮ್ಮಿಕೊಂಡಿದ್ದ ಕ್ರಿಕೆಟ್ ಪ್ರತಿಭಾನ್ವೇಷಣೆಯ ಐದನೇ ಆವೃತ್ತಿಯು ಯಶಸ್ವಿಯಾಗಿ ಪೂರ್ಣಗೊಂಡಿತು.

ಜು.15 ಮತ್ತು ಜು.18 ರಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಪ್ರತಿಭಾನ್ವೇಷಣೆ ಪಂದ್ಯವನ್ನು ಏರ್ಪಡಿಸಲಾಗಿತ್ತು. ಮೈಸೂರಿನಲ್ಲಿ ನಡೆದ ಆಯ್ಕೆ ಪಂದ್ಯಕ್ಕೆ 240 ಜನ ಉದಯೋನ್ಮುಖ ಆಕಾಂಕ್ಷಿಗಳು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದರು. ಅವರಲ್ಲಿ 68 ಜನ ಸ್ಪಿನರ್ಗಳು, 70 ಜನ ಬ್ಯಾಟ್ಸ್ಮನ್ಗಳು, 82 ಜನ ಆಲ್ ರೌಂಡರ್ಗಳು ಮತ್ತು 15 ಜನ ವಿಕೆಟ್ ಕೀಪರ್ಗಳು ಇದ್ದರು.

ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಆಯ್ಕೆ ಪಂದ್ಯಾವಳಿಯಲ್ಲಿ 250 ಯುವ, ಉತ್ಸಾಹಿ ಕ್ರಿಕೆಟ್ ಆಟಗಾರರು ಸ್ಪರ್ಧೆಯಲ್ಲಿದ್ದರು. ಅವರಲ್ಲಿ 75 ಜನ ಮಧ್ಯಮ ವೇಗಿ ಬೌಲರ್ಗಳು, 50 ಜನ ಸ್ಪಿನರ್ಗಳು, 60 ಬ್ಯಾಟ್ಸ್ಮನ್ಗಳು,65 ಜನ ಆಲ್ ರೌಂಡರ್ಗಳು ಹಾಗೂ 10 ಜನ ವಿಕೆಟ್ ಕೀಪರ್ಗಳು ಇದ್ದರು.

500 ಯುವ, ಉತ್ಸಾಹಿ ಕ್ರಿಕೆಟ್ ಆಟಗಾರರು ಸ್ಪರ್ಧೆಯಲ್ಲಿ ಇಬ್ಬರು ಆಟಗಾರರು ಸೈಕಲ್ ಪ್ಯೂರ್ ಅಗರಬತ್ತೀಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಕೆಪಿಎಲ್ 2018 ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಮೈಸೂರು ವಾರಿಯರ್ಸ್ ಮಾಲೀಕ ಅರ್ಜುನ್ ರಂಗ, ಬಾರಿಯ ಪ್ರತಿಭಾನ್ವೇಷಣೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವಿಧ ಭಾಗಗಳಿಂದ ಸುಮಾರು 500ಕ್ಕೂ ಹೆಚ್ಚು ಕ್ರೀಡಾಪಟುಗಳು ಆಗಮಿಸಿದ್ದರು. ನಮ್ಮ ರಾಜ್ಯದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಕ್ರಿಕೆಟ್ ಪ್ರತಿಭೆಗಳನ್ನು ಕಂಡು ನಮಗೆ ಆಶ್ಚರ್ಯವೂ ಸಂತೋಷವೂ ಆಯಿತು. ಇದು ಯಾವಾಗಲೂ ಮೈಸೂರು ವಾರಿಯರ್ಸ್ ತಂಡಕ್ಕೆ ಅದ್ಭುತ ಆಟಗಾರರನ್ನು ನೀಡಿದೆ ಎಂದು ಹೇಳಿದರು.

ಕಳೆದ ಕೆಲ ವರ್ಷಗಳಲ್ಲಿ, ತನ್ನ ಪ್ರಮುಖ ಬ್ರಾಂಡ್ ಆಗಿರುವ ಸೈಕಲ್ ಪ್ಯೂರ್ ಅಗರಬತ್ತೀಸ್ ಮೂಲಕ ಎನ್ಆರ್ ಸಮೂಹವು ಭಾರತದಲ್ಲಿ ಕ್ರಿಕೆಟ್ ಜೊತೆಗೆ ಸಹಯೋಗ ಹೊಂದಿದ ಪ್ರಮುಖ ಬ್ರಾಂಡ್ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅಲ್ಲದೆ, ರೆಡ್ ಅಲರ್ಟ್, ಥರ್ಡ್ ಅಂಪೈರ್ ಬ್ರಾಂಡಿಂಗ್ ಮತ್ತು ಮೈಲ್ ಸ್ಟೋನ್ ಬ್ರಾಂಡಿಂಗ್ ನಂತಹ ಉತ್ತೇಜಕ ಕ್ರಿಕೆಟ್ ಬ್ರಾಂಡಿಂಗ್ಗಳ ಜೊತೆಗೆ ಪಾಲ್ಗೊಂಡಿದ್ದಾರೆ. ಪ್ರತಿ ವರ್ಷ ಹಲವು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪ್ರಮುಖ ಪ್ರಾಯೋಜಕರಾಗಿ ಗುರುತಿಸಿಕೊಳ್ಳುವ ಜೊತೆಗೆ, ಸೈಕಲ್ ಪ್ಯೂರ್ ಅಗರಬತ್ತೀಸ್ ವ್ಯಾಪಕವಾಗಿ ಜನಪ್ರಿಯತೆ ಪಡೆದಿರುವ ಮತ್ತು ಯಶಸ್ವಿಯಾಗಿರುವಪ್ರೇ ಫಾರ್ ಇಂಡಿಯಾ” (ಭಾರತಕ್ಕಾಗಿ ಪ್ರಾರ್ಥಿಸಿ) ಅಭಿಯಾನವನ್ನು ಸಹ ಪ್ರಾರಂಭಿಸಿದೆ. (ಎಂ.ಎನ್)

Leave a Reply

comments

Related Articles

error: