ಸುದ್ದಿ ಸಂಕ್ಷಿಪ್ತ
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಪದವಿ ದಿನ ‘ಡಿ.17’
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ 2016ರ ಪದವಿ ದಿನವನ್ನು ಡಿ.17ರ ಶನಿವಾರ ಮಧ್ಯಾಹ್ನ 4:30ಕ್ಕೆ ನೈಮಿಷಂ ಆವರಣದ ಸೆಮಿನಾರ್ನಲ್ಲಿ ಆಯೋಜಿಸಲಾಗಿದೆ. ಮಣಿಪಾಲ ವಿವಿಯ ಉಪಕುಲಪತಿ ಡಾ.ಹೆಚ್.ವಿನೋದ ಭಟ್, ಸ್ವಾಮಿವಿವೇಕಾನಂದ ಯೋಗ ಸಂಶೋಧನ ಸಂಸ್ಥೆ ಕುಲಪತಿ ಡಾ.ಹೆಚ್.ಆರ್.ನಾಗೇಂದ್ರ ಹಾಗೂ ಎವೈಜೆಎನ್ಐಎಚ್ಎಚ್ ಮುಂಬೈ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮೈಸೂರಿನ ಮಾಜಿ ನಿರ್ದೇಶಕ ಡಾ.ಎನ್.ರತ್ನ ಉಪಸ್ಥಿತರಿರುವರು. ಸಂಸ್ಥೆಯ ನಿರ್ದೇಶಕ ಡಾ.ಎಸ್.ಆರ್.ಸಾವಿತ್ರ ಅಧ್ಯಕ್ಷತೆ ವಹಿಸುವರು.