ಸುದ್ದಿ ಸಂಕ್ಷಿಪ್ತ
ವೀಣಾವಾದನ ಸಂಗೀತ ಕಾರ್ಯಕ್ರಮ ‘ಡಿ.17’
ಮೈಸೂರಿನ ರಾಗ ಸಂಗೀತ ಅಕಾಡೆಮಿಯಿಂದ ಡಿ.17ರ ಶನಿವಾರ ಸಂಜೆ 4:30 ರಿಂದ ಆರೋಗ್ಯ ಮತ್ತು ಸಂಗೀತ ಕಾರ್ಯಕ್ರಮವನ್ನು ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಪ್ರಜ್ಞಾ ಕುಟೀರಾ ಅಯುರ್ವೇದ ಕೇಂದ್ರದಲ್ಲಿ ಹಮ್ಮಿಕೊಂಡಿದೆ. ಆರೋಗ್ಯಕ್ಕೆ ಯೋಗ ವಿಷಯವಾಗಿ ಪ್ರಜ್ಞಾ ಕುಟೀರಾ ಆಯುರ್ವೇದ ಕೇಂದ್ರದ ನಿರ್ದೇಶಕ ಡಾ.ಎನ್.ವಿ.ಕೃಷ್ಣಮೂರ್ತಿ ಉಪನ್ಯಾಸ ನೀಡುವರು, ನಂತರ ವಿದ್ವಾನ್ ರಾಮನ್ ಬಾಲಚಂದ್ರನ್ ವೀಣಾ ವಾದನ ನಡೆಸಿಕೊಡುವರು, ಇವರಿಗೆ ವಿ| ವಿನೋದ್ ಅನೂರ್ -ಮೃದಂಗ ಹಾಗೂ ವಿ| ರಾಘುನಂದನ್ – ಘಟಂ ಸಾಥ್ ನೀಡುವರು.