ಸುದ್ದಿ ಸಂಕ್ಷಿಪ್ತ

ಅಯ್ಯಪ್ಪ ಸ್ವಾಮಿಗೆ ಧನುರ್ಮಾಸ ವಿಶೇಷ ಪೂಜೆ : ಮಕರ ದೀಪೋತ್ಸವ ‘ಜ.14ರವರೆಗೆ’

ಮೈಸೂರಿನ ಪಾಳ್ಯಂ ಶ್ರೀ ಶಾಸ್ತಾ ಪೀಠಂ ಅಭಯದಾಯಕ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಧನುರ್ಮಾಸ ವಿಶೇಷ ಪೂಜಾ , ಲಕ್ಷಾರ್ಚನಾ ಮತ್ತು ಬ್ರಹ್ಮ ಕಳಶಾಭಿಷೇಕ ಪೂಜಾ ಮಹೋತ್ಸವವನ್ನು ಡಿ.15 ರಿಂದ ಜನವರಿಗೆ 15ರವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಸ್ವಾಮಿಗೆ ಮಹಾಭಿಷೇಕ, ಅಲಂಕಾರಸೇವೆ, ನಾಮಾರ್ಚನೆ, ಮಹಾನಿವೇದನೆ, ಮಂಗಳಾರತಿ, ತೀರ್ಥ, ಪ್ರಸಾದವಿನಿಯೋಗವಿರುವುದು.

ಜ.6ರ ಶುಕ್ರವಾರ ಲಕ್ಷಾರ್ಚನೆ ಮತ್ತು ಬ್ರಹ್ಮ ಕಳಶಾಭಿಷೇಕ, ಜ.8ರ ಭಾನುವಾರ ವಿಶೇಷ ಪೂಜೆ ಹಾಗೂ ಅನ್ನದಾನ ಸೇವೆ ನಂತರ ಜ.14ರ ಶನಿವಾರದಂದು ಮಕರ ದೀಪೋತ್ಸವ ಸೇವೆಯನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: