ಮೈಸೂರು

ವೇಗದೂತ ಬಸ್‍ : ಮಾಸಿಕ ಪಾಸ್ ದರ ಕಡಿತ

state_7_1ಚಿಲ್ಲರೆ ಸಮಸ್ಯೆಯಿಂದಾಗಿ ಕೆ.ಎಸ್.ಆರ್.ಟಿ.ಸಿಯ ವೇಗದೂತ ಸಾರಿಗೆಯ ಮಾಸಿಕ ಬಸ್ ಪಾಸ್‍ ದರವನ್ನು 300 ರೂಪಾಯಿಗಳವರೆಗೆ ನಿಗಮವು ಕಡಿತಗೊಳಿಸಿದೆ.

ಕೇಂದ್ರದ ಮೋದಿ ಸರ್ಕಾರವೂ 500 ಹಾಗೂ 1000 ಮುಖಬೆಲೆಯ ನೋಟು ಅಮಾನ್ಯಗೊಳಿಸಿದ್ದರಿಂದ ಸಾರ್ವಜನಿಕರಿಗೆ ಹಣದ ಮುಗ್ಗಟ್ಟು ಉಂಟಾಗಿದ್ದು ಪರಿಹಾರಕ್ಕೆ ನೂತನ ಪದ್ಧತಿಯನ್ನು ಜಾರಿಗೊಳಿಸಿದೆ. ವೇಗದೂತ ಮಾಸಿಕ ಬಸ್ ಪಾಸ್‍ ದರವನ್ನು 4ನೇ ಹಂತದಿಂದ 20 ಹಂತದವರೆಗೂ ವಿಸ್ತರಿಸಿದೆ. ಸಾಮಾನ್ಯ ಪಾಸ್‍ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಗಮದ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳ ಪಾಸ್‍ ಕೌಂಟರ್‍ಗಳಲ್ಲಿ ಪಾಸ್‍ ಲಭಿಸುತ್ತಿವೆ. ಡಿ.10ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದ್ದು ಪಾಸ್‍ಗೆ 30 ದಿನಗಳ ಕಾಲಾವಧಿಯಿರುವುದು

Leave a Reply

comments

Related Articles

error: