ಪ್ರಮುಖ ಸುದ್ದಿಮೈಸೂರು

ಮೇಯರ್‍ ಅವರಿಂದ ನಿಯಮ ಉಲ್ಲಂಘನೆ..!

ಮೈಸೂರಿನ ನೂತನ ಮೇಯರ್ ಆಗಿರುವ ರವಿಕುಮಾರ್ ಅವರು ನಿಯಮವನ್ನು ಉಲ್ಲಂಘಿಸಿ ನಗರದ ಪ್ರಮುಖ ಭಾಗಗಳಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‍.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನು ಹಾಕಿದ್ದಾರೆ.

ಮೆಟ್ರೊಪೋಲ್ ವೃತ್ತ, ಶೃಂಗಾರ್ ಹೋಟೆಲ್ ವೃತ್ತ, ಅರಸ್ ರಸ್ತೆಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶುಭಾಶಯ ಕೋರಿರುವ ಪೋಸ್ಟರ್‍ಗಳು ರಾರಾಜಿಸುತ್ತಿವೆ.

ಇತ್ತೀಚಿಗೆ ಬಿಜೆಪಿ ಕಾರ್ಯಕರ್ತರೊಬ್ಬರು ನಗರದ ಹಲವೆಡೆ ಪೋಸ್ಟರ್‍ಗಳನ್ನು ಹಾಕಿ ನಗರದ ಅಂದ ಕೆಡಿಸಿದ್ದು ದೊಡ್ಡ ವಿವಾದವಾಗಿ ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಮತ್ತು ಆಯುಕ್ತರಾದ ಜಗದೀಶ್ ಅವರು ಸಭೆ ನಡೆಸಿ ನಗರದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ಪೋಸ್ಟರ್‍ಗಳನ್ನು ಹಾಕುವಂತಿಲ್ಲ. ಹಾಕಲಾಗಿರುವ ಎಲ್ಲ ಪೋಸ್ಟರ್‍ ಗಳನ್ನು ತೆರವುಗೊಳಿಸುವಂತೆ ಆದೇಶಿಸಿದ್ದರು. ಆದರೆ, ಈ ವಿಷಯ ನೂತನ ಮೇಯರ್‍ಗೆ ತಿಳಿದಂತೆ ಕಾಣುತ್ತಿಲ್ಲ.

ನಿಯಮ ಜಾರಿಗೊಳಿಸಿದವರೇ ನಿಯಮವನ್ನು ಉಲ್ಲಂಘಿಸಿದರೆ, ಶಿಕ್ಷಿಸುವವರು ಯಾರು ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

poster-2

Leave a Reply

comments

Related Articles

error: