ಮೈಸೂರು

ಡಿ.16-18: ಪ್ಯಾರಾ ವಾಲಿಬಾಲ್ ನ್ಯಾಷನಲ್ ಚಾಂಪಿಯನ್ ಶಿಪ್

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಫಾರ್ ಫಿಸಿಕಲ್ ಚಾಲೆಂಜ್ಡ್ ಮತ್ತು ಪ್ಯಾರಾ ಒಲಂಪಿಕ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ವಿಕಲಚೇತನರಿಗಾಗಿ  6 ನೇ ಸೀನಿಯರ್ ಸಿಟ್ಟಿಂಗ್ ಪ್ಯಾರಾ ವಾಲಿಬಾಲ್ ನ್ಯಾಷನಲ್ ಚಾಂಪಿಯನ್ ಶಿಪ್ ನ್ನು ಡಿ.16 ರಿಂದ 18 ರವರೆಗೆ ಚಾಮುಂಡಿ ವಿಹಾರ ಒಳಾಂಗಣ ಸ್ಟೇಡಿಯಂ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಪ್ಯಾರಾ ಒಲಂಪಿಕ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಹೆಚ್. ಚಂದ್ರಶೇಖರ್ ತಿಳಿಸಿದರು.

ಮೈಸೂರಿನಲ್ಲಿ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೆಚ್.ಚಂದ್ರಶೇಖರ್ ಮಾತನಾಡಿ ಡಿ.17 ರಂದು ಬೆಳಿಗ್ಗೆ 9.30 ಕ್ಕೆ ಉದ್ಘಾಟನೆ ನೆರವೇರಿಸಲಾಗುತ್ತಿದ್ದು, ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾಧಿಕಾರಿ ಡಿ.ರಂದೀಪ್, ಮೂಡಾ ಅಧ್ಯಕ್ಷ ಧ್ರುವಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ ಚೆನ್ನಣ್ಣವರ್, ಪಾಲಿಕೆಯ ಆಯುಕ್ತ ಜಗದೀಶ್, ಡಾ.ಡಿ.ಮುತ್ತುಕುಮಾರ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ  ಆಕಾಶ್, ರಾಮಚಂದ್ರ, ವಿಜಯರಾವ್ ಸಿಂಧೆ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: