ಮೈಸೂರು

ಕಟಾವಿಗೆ ಬಂದ ಬಾಳೆಗೊನೆ ಕದ್ದೊಯ್ದ ಕಳ್ಳರು

ಮೈಸೂರು, ಜು.19:- ನಂಜನಗೂಡು ಒಕ್ಕಲಗೇರಿ ನಿವಾಸಿಯಾದ ರೈತ ಸಂತೋಷ್‍ಕುಮಾರ್ ಎಂಬವರ  ಗದ್ದೆಯಲ್ಲಿ ಬೆಳೆದ ಬಾಳೇತೋಟದಲ್ಲಿ ಕಳೆದ ರಾತ್ರಿ ಕಳ್ಳರು ಸುಮಾರು 30ಕ್ಕೂ ಹೆಚ್ಚು ಬಾಳೆಗೊನೆಯನ್ನು ಕದ್ದು ಪರಾರಿಯಾಗಿರುವುದು ತಿಳಿದುಬಂದಿದೆ.

ಕಳೆದ ಎರಡು ದಿನಗಳಿಂದ ಸುರಿದ ಮಳೆಯನ್ನೇ ಅಸ್ತ್ರವಾಗಿ ಮಾಡಿಕೊಂಡ ಕಳ್ಳರು ಸಂತೋಷ್‍ಕುಮಾರ್ ಎಂಬ ರೈತರು ಶ್ರಮಪಟ್ಟು ಬೆಳೆದ ಕಟಾವಿಗೆ ಬಂದ ಬಾಳೆಗೊನೆಯನ್ನು ಕಳೆದ ರಾತ್ರಿ ಸುರಿಯುತ್ತಿದ್ದ ಮಳೆಯಲ್ಲೇ ಬಂದು ಸುಮಾರು 30ಕ್ಕೂ ಹೆಚ್ಚು ಬಾಳೆಗೊನೆಯನ್ನು ಕದ್ದು ಪರಾರಿಯಾಗಿದ್ದಾರೆ.

ಸಂತೋಷ್‍ಕುಮಾರ್ ಎಂದಿನಂತೆ ಬೆಳಿಗ್ಗೆ ತೋಟಕ್ಕೆ ಬಂದಾಗ ಕಳ್ಳರ ಕೃತ್ಯ ಬೆಳಕಿಗೆ ಬಂದಿದೆ. ಬೆಳೆದ ಬೆಳೆ ಕೈಗೆ ಸಿಗುವ ಸಂದರ್ಭದಲ್ಲಿ ಈ ರೀತಿ ಕಳ್ಳತನ ಆಗಿರುವುದು ಬರ ಸಿಡಿಲು ಬಡಿದಂತಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: