
ಮೈಸೂರು
ನಾಡಿನ ಅಭಿಮಾನ ಮೂಡಿಸಿದ ವಿದ್ಯಾರ್ಥಿಗಳು
ನಾವಾಡುವ ನುಡಿಯೇ ಕನ್ನಡ ನುಡಿ.., ಕನ್ನಡದಾ ರವಿ ಮೂಡಿ ಬಂದ.. ಮುನ್ನೆಡೆವ ಬೆಳಕನ್ನು ತಂದಾ… ಎಂಬ ಹಾಡುಗಳು ತೇಲಿ ಬರುತ್ತಿದ್ದಂತೆ ವೇದಿಕೆಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ತಾಯಿ ಭುವನೇಶ್ವರಿಗೆ ಆರತಿ ಎತ್ತಿದ ಮಕ್ಕಳು ನೋಡುಗರಲ್ಲಿ ನಾಡಿನ ಅಭಿಮಾನ ಮೂಡಿಸಿದರು.
ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಜರುಗಿದ ಮೈಸೂರಿನ ರಾಜೇಂದ್ರ ನಗರದ ಎಸ್.ಸಿ.ವಿ. ಆಂಗ್ಲ ಮಾಧ್ಯಮ ಶಾಲೆ. ಶಾಲೆಗಳ ಮಕ್ಕಳು ನಡೆಸಿಕೊಟ್ಟ ಕಾರ್ಯಕ್ರಮಗಳು, ಎಲ್ಕೆಜಿ ಮತ್ತು ಹೈಸ್ಕೂಲ್ ಮಕ್ಕಳ ನೃತ್ಯದ ಸೊಬಗು ಪ್ರೇಕ್ಷಕರ ಮನಸೂರೆಗೊಳ್ಳುವಂತಿತ್ತು.
ಶಾಲೆಯ ಮುಖ್ಯಸ್ಥರಾದ ಭಾನುಪ್ರಕಾಶ್ ಅವರ ಮಾತನಾಡಿ ಪ್ರತಿವರ್ಷ ಶಾಲೆಯ ವಾರ್ಷಿಕೋತ್ಸವದಂದು ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿನ ವೇದಿಕೆಯಲ್ಲಿ ಮಕ್ಕಳಿಗೆ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ನಾಟಕ, ಶಾಸ್ತ್ರೀಯ ನೃತ್ಯ ಮೂಲಕ ಅಭಿವ್ಯಕ್ತಿ ಸಾಮರ್ಥ್ಯದ ಬಳಕೆಗೆ ವೇದಿಕೆ ನೆರವಾಗುತ್ತದೆ. ನಮ್ಮ ಶಾಲೆ ಮಕ್ಕಳಿಂದ ಪ್ರತಿವರ್ಷ ಆಚರಿಸಲಾಗುತ್ತದೆ. ಪ್ರತಿಭೆ ಅನಾವರಣಕ್ಕೆ ಅವಕಾಶವೂ ಸಿಕ್ಕಂತೆ ಆಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮೈಸೂರಿನ ವಿವಿಧ ಸ್ವಯಂಸೇವಾ ಸಂಸ್ಥೆಗಳಲ್ಲಿ ಸೇವಾ ಕಾರ್ಯ ಮಾಡುತ್ತಿರುವ ಜರ್ಮನಿಯ ಸುಮಾರು 15 ಜನರಿಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ರೇಖಾ, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಕಾಂತ್ ರಾವ್ ಹಾಗೂ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.