ಮೈಸೂರು

ದೇವನೂರು 3ನೇ ಹಂತ ಬಡಾವಣೆಯ ನಿವೇಶನದ ಮಂಜೂರಾತಿ ಪತ್ರ ವಿತರಣೆ

ಮೈಸೂರು,ಜು.19:- ದೇವನೂರು 3ನೇ ಹಂತ ಬಡಾವಣೆಯಲ್ಲಿ ಕೇಂದ್ರ ಗ್ರಂಥಾಲಯ ನಿರ್ಮಾಣ ಉದ್ದೇಶಕ್ಕಾಗಿ ದೇವನೂರು 3ನೇ ಹಂತ ಬಡಾವಣೆಯ ಸಿ.ಎ ನಿ.ಸಂಖ್ಯೆ-06ನ್ನು ಮಂಜೂರು ಮಾಡಲಾಗಿದ್ದು, ನಿವೇಶನದ ಮಂಜೂರಾತಿ ಪತ್ರವನ್ನು ದಿನಾಂಕ ನಿನ್ನೆ  ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್  ಇವರು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭಾಂಗಣದಲ್ಲಿ ವಿತರಿಸಿದರು.

ನಂತರ ನರಸಿಂಹರಾಜ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಅಭಿವೃದ್ದಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು, ಸಭೆಯಲ್ಲಿ ಪ್ರಾಧಿಕಾರದ ಆಯುಕ್ತರು, ಅಧೀಕ್ಷಕ ಅಭಿಯಂತರು, ನಗರ ಯೋಜಕ ಸದಸ್ಯರು, ಕಾರ್ಯದರ್ಶಿ, ಕಾರ್ಯಪಾಲಕ ಅಭಿಯಂತರುಗಳು, ಜಿಲ್ಲಾ ಗ್ರಂಥಾಲಯದ ಉಪ ನಿರ್ದೇಶಕರು, ಎಲ್ಲಾ ವಲಯ ಅಧಿಕಾರಿಗಳು ಹಾಗೂ ವಿಶೇಷ ತಹಶೀಲ್ದಾರ್ ರವರುಗಳು ಹಾಗೂ ಸಂಬಂಧಪಟ್ಟ ಸಹಾಯಕ/ಕಿರಿಯ ಅಭಿಯಂತರುಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: