ಕರ್ನಾಟಕ

ಐಎಎಸ್​​ ಅಧಿಕಾರಿಗಳ ಮನೆ ದೋಚಿದ್ದ ಕಳ್ಳರ ಬಂಧನ

ಬೆಂಗಳೂರು (ಜುಲೈ 19): ಇಬ್ಬರು ಐಎಎಸ್ ಅಧಿಕಾರಿಗಳ ಮನೆ ದೋಚಿದ್ದ ರಾಜಸ್ಥಾನ ಮೂಲದ ಕಳ್ಳರನ್ನು ಬೆಂಗಳೂರಿನ ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ಜಗದೀಶ್ ಮತ್ತು ರತನ್ ಬಂಧಿತ ಆರೋಪಿಗಳು. ಗುಲ್ಬರ್ಗ ರೀಜಿನಲ್ ಕಮೀಷನರ್ ಆಗಿರುವ ಐಎಎಸ್ ಅಧಿಕಾರಿ ಸುಬೋದ್ ಯಾದವ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್ ಆಚಾರ್ ಮನೆಯಲ್ಲಿ ಈ ಇಬ್ಬರು ಕಳ್ಳತನ ನಡೆಸಿದ್ದರು. ಕಳೆದ ವರ್ಷ ಡಾಲರ್ಸ್ ಕಾಲೋನಿಯಲ್ಲಿರುವ ಈ ಅಧಿಕಾರಿಗಳ ಮನೆಗಳಲ್ಲಿ ಕಳ್ಳತನ ಮಾಡಿದ್ದರು.

ಆರೋಪಿಗಳ ಬಂಧನದಿಂದ ಒಟ್ಟು ಎಂಟು ಕಳ್ಳತನದ ಪ್ರಕರಣಗಳು ಪತ್ತೆಯಾಗಿವೆ. ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ ಠಾಣೆಗಳಿಗೂ ಈ ಆರೋಪಿಗಳು ಬೇಕಾಗಿದ್ದಾರೆ. ಆ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಮನೆಗಳ್ಳತನದ ಪ್ರಕರಣಗಳನ್ನು ತಾವೇ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಬಂಧಿತರಿಂದ 20 ಲಕ್ಷ ಬೆಲೆಬಾಳುವ 600 ಗ್ರಾಂ ಚಿನ್ನಾಭರಣ ಹಾಗೂ ಎರಡೂವರೆ ಕೆ‌ಜಿ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹಲವು ಶ್ರೀಮಂತ ಬಡಾವಣೆಗಳಿದ್ದು, ಕಳ್ಳತನ ಮಾಡೋದು ಸುಲಭ ಎಂಬ ಕಾಣರಕ್ಕೆ ರಾಜಸ್ಥಾನದಿಂದ ಇಲ್ಲಿಗೆ ಬಂದು ಮನೆಗಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: