ಮೈಸೂರು

ಇಪ್ಪತ್ತು ವರ್ಷ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಆನೆ “ಕೋಕಿಲಾ” ನಿಧನ

ನಾಡಹಬ್ಬ ದಸರಾ ಜಂಬೂ ಸವಾರಿಯ ಆನೆ ಕೋಕಿಲಾ (77) ತೀವ್ರ ಅನಾರೋಗ್ಯದಿಂದ ನಿಧನವಾಗಿದೆ.

ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದ ಮೂರ್ಕಾಲ್ ಆನೆ ಶಿಬಿರದಲ್ಲಿ ಹೆಣ್ಣಾನೆ ಕೋಕಿಲ ಗುರುವಾರ ನಿಧನವಾಗಿದ್ದು ಕಳೆದ ಹಲವಾರು ದಿನಗಳಿಂದ ಶ್ವಾಸಕೋಶದ ಸಮಸ್ಯೆ ಹಾಗೂ ಇತರೆ ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದಿದೆ.

ಕೋಕಿಲಾಗೆ ಹಲ್ಲುಗಳು ಉದುರಿದ್ದರಿಂದ ಆಹಾರವನ್ನು ಜಗಿಯುವುದಕ್ಕೆ ತೀವ್ರ ಕಷ್ಟಪಡುತ್ತಿತ್ತು. ತನ್ನೆರಡು ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡಿದ್ದರಿಂದ ಮೂರ್ಕಾಲು ಬಳ್ಳೆ ಕ್ಯಾಂಪ್‍ಗೆ ಸೇರಿಸಲಾಗಿತ್ತು. ಅಲ್ಲಿ ಇತರೆ ಹೆಣ್ಣಾನೆಗಳಾದ ವರಲಕ್ಷ್ಮಿ ಹಾಗೂ ಮೇರಿಯೊಂದಿಗೆ ಕಾಲಕಳೆಯುತ್ತಿತ್ತು.

ಸುಮಾರು 20 ವರ್ಷಗಳ ಕಾಲ ನಾಡಹಬ್ಬ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡ ಹಿರಿಮೆಯನ್ನು ಹೊಂದಿರುವ ಆನೆ ಕೋಕಿಲಾಳನ್ನು ಪಶುವೈದ್ಯ ಡಾ.ಉದಯಶಂಕರ್ ಹಾಗೂ ಹುಲಿ ಯೋಜನಾ ನಿರ್ದೇಶಕ ಮಣಿಕಾಂತನ್, ಎಸಿಎಫ್ ಕೃಷ್ಣಪ್ರಸನ್ನ ಹಾಗೂ ಇತರರು ಸ್ಥಳಕ್ಕಾಗಮಿಸಿ ಪಾರ್ಥಿವ ಶರೀರದ ದರ್ಶನ ಪಡೆದರು.

Leave a Reply

comments

Related Articles

error: