ಮೈಸೂರು

ಗುಡ್ಡಪ್ಪದಿರ ರಕ್ಷಣೆಗೆ ಒತ್ತಾಯ

ಶಾಸಕ ವಿಶ್ವನಾಥ್ ಗೆ ಸಚಿವ ಸ್ಥಾನಗೆ ಆಗ್ರಹ

ಮೈಸೂರು,ಜು.19 : ಮಹದೇಶ್ವರ ಬೆಟ್ಟದಲ್ಲಿ ವಾಸಿಸುವ ಗುಡ್ಡಪ್ಪದಿರಿಗೆ ಮುಜರಾಯಿ ಇಲಾಖೆ ಅಧಿಕಾರಿಗಳು, ಹೋಮ್ ಗಾರ್ಡ್ ಸಿಬ್ಬಂದಿ ವರ್ಗದವರು ಕಿರುಕುಳ ನೀಡುತ್ತಿದ್ದು ಅವರಿಗೆ ಪ್ರತ್ಯೇಕ ವಸತಿ ಕಲ್ಪಿಸಬೇಕೆಂದು ಅಂತರಾಷ್ಟ್ರೀಯ ಕಂಸಾಳೆ ಮಹದೇವಯ್ಯ ಕಲಾ ಒಕ್ಕೂಟದಿಂದ ಕಂಸಾಳೆ ರವಿ ಒತ್ತಾಯಿಸಿದ್ದಾರೆ.

ಅವರುಗಳ ಜೋಳಿಗೆ ಕಿತ್ತುಕೊಂಡು ಬಿಕ್ಷುಕರ ವಸತಿ ಗೃಹಕ್ಕೆ ಬಿಡುತ್ತಿದ್ದು ಮಾಡುತ್ತಿರುವುದು ಖಂಡನೀಯ, ಸಂಪ್ರದಾಯದಂತೆ ಬಿಕ್ಷಾಟನೆ ಅವರ ಕುಲಕಸುಬಾಗಿದ್ದು ಅದನ್ನು ಅಪೇಕ್ಷಿಸದೆ ಅವರುಗಳಿಗೆ ಸೂಕ್ತ ವಸತಿ ಸೇರಿದಂತೆ ಸೌಕರ್ಯ ನೀಡುವ ಮೂಲಕ ನೆರವು ನೀಡಬೇಕೆಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿಯಲ್ಲಿ ಮನವಿ ಮಾಡಿದ್ದಾರೆ.

ಶಾಸಕ ವಿಶ್ವನಾಥ್ ಗೆ ಸಚಿವ ಸ್ಥಾನ : ಹಿರಿಯ ನಾಯಕರು, ಕುರುಬ ಸಮುದಾಯದವರಾದ ಶಾಸಕ ಹೆಚ್.ವಿಶ್ವನಾಥ್ ಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: