ಮೈಸೂರು

ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ : ಇಬ್ಬರ ಬಂಧನ

ಮೈಸೂರು,ಜು.20:- ಯುವತಿ ಮತ್ತು ಇಬ್ಬರು ಬಾಲಕಿಯರ ಮಾನಸಿಕ ಅಸ್ವಸ್ಥತೆಯ ಸ್ಥಿತಿಯನ್ನೇ ಬಂಡವಾಗಿಸಿಕೊಂಡ ಯುವಕನೋರ್ವ ತನ್ನ ಮೂವರು ಸ್ನೇಹಿತರೊಂದಿಗೆ ಅವರ ಮೇಲೆ ನಿರಂತರ ಒಂದು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ಮನೆಗೆಲಸದೊಂದಿಗೆ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಮಹಿಳೆಯೊಬ್ಬರ ಮೂವರು ಹೆಣ್ಣು ಮಕ್ಕಳನ್ನು ಸಾಕೀಬ್ ಎಂಬಾತ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆಯ ಅಪ್ರಾಪ್ತ ಹೆಣ್ಣು ಮಕ್ಕಳು ಮತ್ತು 18ವರ್ಷದ ಯುವತಿಯನ್ನು ಮೂವರು ಸ್ನೇಹಿತರೊಂದಿಗೆ ಮೈಸೂರು,ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಕರೆದುಕೊಂಡು ಹೋಗಿ ನಿರಂತರ ದೌರ್ಜನ್ಯವೆಸಗಿದ್ದಾನೆ. ವಾರದ ಹಿಂದೆ ಮಕ್ಕಳು ಮನೆಯಿಂದ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಮಹಿಳೆ ಮಕ್ಕಳು ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದರು. ಬೆಂಗಳೂರಿನಲ್ಲಿದ್ದ ಮೂವರು ಹೆಣ್ಣುಮಕ್ಕಳನ್ನು ರಕ್ಷಿಸಿ ಒಡನಾಡಿ ಸಂಸ್ಥೆಯವರು ಮೈಸೂರಿಗೆ ಕರೆ ತಂದಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದರು. ಅಪ್ರಾಪ್ತ ಯುವತಿಗೆ ಭಟ್ಕಳದ ಅಬಾನ್ ಕರೆ ಮಾಡಿದ ಹಿನ್ನೆಲೆಯಲ್ಲಿ ಬೆನ್ನತ್ತಿದ ಪೊಲೀಸರು ಮಂಗಳೂರಿನ ಲಾಡ್ಜ್ ನಲ್ಲಿ ಅಬಾನ್ ಮತ್ತು ಸಾಕೀಬ್ ನನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: