ಸುದ್ದಿ ಸಂಕ್ಷಿಪ್ತ

ಮಂಡ್ಯ: ಆರ್.ಪಿ ರಸ್ತೆಯಲ್ಲಿ 1 ದಿನದ ಮಟ್ಟಿಗೆ ದ್ವಿಮುಖ ವಾಹನ ಸಂಚಾರಕ್ಕೆ ಅವಕಾಶ

ಮಂಡ್ಯ (ಜುಲೈ 20): ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಜುಲೈ 20 ರಂದು ಮಂಡ್ಯ ನಗರದ ಕರ್ನಾಟಕ ಸಂಘದ ವತಿಯಿಂದ ಹೊಸದಾಗಿ ನಿರ್ಮಿಸಿರುವ ದಿ:ಕೆ.ವಿ.ಶಂಕರೇಗೌಡ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಮತ್ತು ಮಂಡ್ಯ ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಈ ಕಾರ್ಯಕ್ರಮದಲ್ಲಿ 40 ರಿಂದ 50 ಸಾವಿರ ಜನರು ಸೇರುವುದಾಗಿ ತಿಳಿದುಬಂದಿರುವುದರಿಂದ ಸಾರ್ವಜನಿಕರು ಮತ್ತು ಗಣ್ಯರನ್ನು ಒಂದೇ ರಸ್ತೆಯಲ್ಲಿ ಸಂಚರಿಸುವುದು ಭದ್ರತಾ ದೃಷ್ಟಿಯಿಂದ ಸಮರ್ಪಕವಾಗಿಲ್ಲದ ಕಾರಣ ಜುಲೈ 20 ರಂದು ಮಂಡ್ಯ ನಗರದ ಆರ್.ಪಿ ರಸ್ತೆಯಲ್ಲಿನ ಏಕಮುಖ ಸಂಚಾರವನ್ನು ದ್ವಿಮುಖವಾಗಿ ಸಂಚರಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ಆದೇಶ ಹೊರಡಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: