
ಪ್ರಮುಖ ಸುದ್ದಿ
ಮುಖ್ಯಮಂತ್ರಿಗಳು ಬರ್ತಿರೋದರಿಂದ ಹೆದ್ದಾರಿ ಬಂದ್ !?
ರಾಜ್ಯ(ಮಂಡ್ಯ)ಜು.20:- ಜನಪರ ಮುಖ್ಯಮಂತ್ರಿಗಳಿಂದಲೇ ಜನರಿಗೆ ಸಂಕಷ್ಟ ಶುರುವಾಗಿದೆಯಂತೆ. ಹಾಗಂತ ಮಂಡ್ಯ ಜನತೆ ಹೇಳುತ್ತಿದ್ದಾರಂತೆ. ಅದಕ್ಕೆ ಕಾರಣವೂ ಇದೆಯಂತೆ. ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಂಡ್ಯಕ್ಕೆ ವಿವಿಧ ಕಾರ್ಯಕ್ರಮ ನಿಮಿತ್ತ ಬರುತ್ತಿರುವುದರಿಂದ ಮಂಡ್ಯ ಜಿಲ್ಲಾಡಳಿತ ಮೈಸೂರು ಬೆಂಗಳೂರು ಹೆದ್ದಾರಿ ಬಂದ್ ಮಾಡಿ ಆದೇಶ ಹೊರಡಿಸಿದೆ.
ಮದ್ದೂರಿನಿಂದ ಶ್ರೀರಂಗಪಟ್ಟಣದವರೆಗೂ ರಸ್ತೆ ಸಂಚಾರ ನಿಷೇಧ ಮಾಡಲಾಗಿದ್ದು, ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಆದೇಶ ಹೊರಡಿಸಿದ್ದಾರೆ. ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನೇನೋ ಕಲ್ಪಿಸಲಾಗಿದೆ. ಆದರೆ ಜನಪರ ಮುಖ್ಯಮಂತ್ರಿ, ಸಿಂಪಲ್ ಆಗಿರುವ ಮುಖ್ಯಮಂತ್ರಿಗಳ ಆಗಮನಕ್ಕೆ ಜನಸಾಮಾನ್ಯರಿಗೆ ತೊಂದರೆ ಕೊಡುವುದು ಎಷ್ಟು ಸರಿ, ಮುಖ್ಯಮಂತ್ರಿಗಳೇ ಇದು ನಿಮ್ಮ ಗಮನಕ್ಕೆ ಬಂದಿಲ್ಲವಾ? ಬಂದಿದ್ದರೂ ಸುಮ್ಮನಿದ್ದೀರಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)