ಮೈಸೂರು

ಅಸಿಕಾನ್‍ನಲ್ಲಿ ಶಸ್ತ್ರ ಚಿಕಿತ್ಸೆಗಳ ಚಿತ್ರಗಳ ಪ್ರದರ್ಶನ, ವಿಚಾರ ವಿನಿಮಯ

ಅಖಿಲ ಭಾರತ ಚಿಕಿತ್ಸಕರ ಸಂಘದ (ಅಸಿಕಾನ್-2016) 76ನೆಯ ರಾಷ್ಟ್ರೀಯ ಸಮ್ಮೇಳನದಲ್ಲಿ ಶುಕ್ರವಾರವೂ ಕೂಡ ದೇಶ ವಿದೇಶಗಳ ವಿವಿಧ ಆಸ್ಪತ್ರೆಗಳ ಅನುಭವಿ ತಜ್ಞರು ವೈದ್ಯರು ವಿಶೇಷ ಶಸ್ತ್ರ ಚಿಕಿತ್ಸೆಗಳ ಚಿತ್ರಗಳ ಪ್ರದರ್ಶನ ಹಾಗೂ ವಿಚಾರ ವಿನಿಮಯ ಮಾಡಿಕೊಂಡು ಪ್ರಬಂಧಗಳನ್ನು ಮಂಡಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುನೈಟೆಡ್ ಕಿಂಗ್‍ಡಮ್‍ನ ಡಾ.ಡೇವಿಡ್ ವ್ಯಾನ್ ಡಿಲಿನ್ ಅವರು ಶಸ್ತ್ರಚಿಕಿತ್ಸೆ ಆದ ನಂತರ ಮಾನವನ ದೇಹವನ್ನು ಕತ್ತರಿಸಿದ ಭಾಗವನ್ನು ಹೇಗೆ ಮುಚ್ಚಿ ಅದಕ್ಕೆ ಹೊಲಿಗೆ ಹಾಕಬೇಕೆನ್ನುವ ಆಧುನಿಕ ವಿಧಾನವನ್ನು ತಿಳಿಸಿದರು.

ಯುಕೆಯ ರಾಯಲ್ ಕಾಲೇಜ್ ಆಫ್ ಫಿಜಿಶಿಯನ್ಸ್ ಅಂಡ್ ಸರ್ಜನ್ಸ್ ಆಫ್ ಗ್ಲ್ಯಾಸ್ಗೋದ ಡಾ.ಡೇವಿಡ್ ಗ್ಯಾಲೋವೆ ಅವರು ಮಾತನಾಡಿ, ಮಾನವನ ಶರೀರಕ್ಕೆ ತಗುಲುವ ವಿವಿಧ ಕಾಯಿಲೆಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು. ಅವುಗಳ ಬಗ್ಗೆ ಮೊದಲು ಸಂಪೂರ್ಣವಾಗಿ ಮಾಹಿತಿ ಪಡೆದು, ಕಾಯಿಲೆಯನ್ನು ಗುಣಪಡಿಸುವ ಬಗ್ಗೆ ಪರಿಪೂರ್ಣವಾಗಿ ತಿಳಿದು ಹೇಗೆ ಚಿಕಿತ್ಸೆ ನೀಡಬೇಕೆಂಬುದನ್ನು ತಿಳಿಸಿದರು.

ಚೆನ್ನೈನ ಡಾ.ಪರಿ ವಿಜಯಾ ರಾಘವನ್ ಮಾತನಾಡಿ, ಯಕೃತ್ತಿನ ಮೇಲೆ ಆಗಿರುವ ಗಾಯವನ್ನು ಬಯಾಪ್ಸಿ ಮೂಲಕ ಕಂಡುಕೊಳ್ಳುವ ಪ್ರಯತ್ನದಲ್ಲಿ ದೇಹದೊಳಗಿನ ಭಾಗಕ್ಕೆ ಸೂಕ್ಷ್ಮವಾಗಿ ಗಾಯಗಳಾಗಬಹುದು. ಆದ್ದರಿಂದ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಎಂಆರ್‍ಐ, ಸಿ.ಟಿ. ಸ್ಕ್ಯಾನ್‍ಗಳ ಮೂಲಕ ಸಮಸ್ಯೆ ಏನೆಂದು ತಿಳಿಯುವುದು ಸೂಕ್ತ. ಯಕೃತ್ತಿನ ಮೇಲೆ ಕಂಡುಬರುವ ಗಾಯಗಳಲ್ಲಿ ಕೆಲವು ಅಪಾಯಕಾರಿ, ಮತ್ತೆ ಕೆಲವು ಅಪಾಯಕಾರಿ ಅಲ್ಲದ ಗಾಯಗಳು ಹಾಗೂ ಬೆಳೆದುಕೊಂಡ ಕೆಟ್ಟ ಮಾಂಸಗಳೂ ಇರುತ್ತವೆ. ಅವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕುವುದರ ಜೊತೆಗೆ ದೇಹದ ಬೇರೆ ಭಾಗಗಳಲ್ಲಿ ಅದು ಮತ್ತೆ ಬೆಳೆಯದಂತೆ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕೆಂದು ತಿಳಿಸಿದರು.

ವಿವಿಧ ವಿಷಯಗಳ ಬಗ್ಗೆ ತಜ್ಞ ವೈದ್ಯರು ಹಾಗೂ ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು.

Leave a Reply

comments

Related Articles

error: