ಮೈಸೂರು

ಬರಪರಿಹಾರ ಹಣ ದುರುಪಯೋಗ : ಗ್ರಾಮಲೆಕ್ಕಿಗ ಅಮಾನತು

ತಿ.ನರಸೀಪುರ ತಾಲ್ಲೂಕಿನ ತುಂಬಲ ವೃತ್ತದ ಗ್ರಾಮಲೆಕ್ಕಿಗರೋರ್ವರು  ಬರಪರಿಹಾರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ.

ಅಮಾನತುಗೊಂಡವರನ್ನು ಅಬ್ದುಲ್ ರಶೀದ್ ಎಂದು ಹೇಳಲಾಗಿದೆ. ಬರಪರಿಹಾರ ವಿತರಣೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಿ.ನರಸೀಪುರ ತಹಶೀಲ್ದಾರ್ ಶಂಕರಯ್ಯ ಹಾಗೂ ಮೈಸೂರು ಉಪವಿಭಾಗಾಧಿಕಾರಿ ಸಿ.ಎಲ್.ಆನಂದ ಪ್ರಾಥಮಿಕ ತನಿಖೆ ನಡೆಸಿದ್ದರು. 19.47ಲಕ್ಷರೂ. ಅನುದಾನದಲ್ಲಿ 74ಸಾವಿರ ರೂ.ಗಳನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಅವರು ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದರು.

ಅಲಗೂಡು ಗ್ರಾಮದ ಹೊಣೆಯನ್ನು ಅಬ್ದುಲ್ ರಶೀದ್ ಗೆ ಹೆಚ್ಚುವರಿಯಾಗಿ ನೀಡಲಾಗಿತ್ತು. 2015-16 ನೇ ಸಾಲಿನ ಬರಪರಿಹಾರ ವಿತರಣೆಗಾಗಿ 506 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ರೈತರಲ್ಲದ 19 ಮಂದಿಗೆ ರಶೀದ್ 74ಸಾವಿರ ರೂ.ಹಣವನ್ನು ನೀಡಿದ್ದರಲ್ಲದೇ ಪಹಣಿಯ ವಿಸ್ತೀರ್ಣವನ್ನೂ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಅಬ್ದುಲ್ ರಶೀದ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Leave a Reply

comments

Related Articles

error: