ಪ್ರಮುಖ ಸುದ್ದಿಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ಡಿ.19 ರಿಂದ ಪೊಲೀಸ್ ಕರ್ತವ್ಯ ಕೂಟ

ಪೊಲೀಸರ ಮನೋಸ್ಥೈರ್ಯ ಮತ್ತು ಕಾರ್ಯಕ್ಷಮತೆ ವರ್ಧಿಸಲು ಪೊಲೀಸ್ ಕರ್ತವ್ಯ ಕೂಟಗಳು ಅವಶ್ಯಕವೆಂದು ತಿಳಿಸಿರುವ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಮೈಸೂರಿನಲ್ಲಿ 60ನೇ ಅಖಿಲ ಭಾರತ  ಪೊಲೀಸ್ ಕರ್ತವ್ಯ ಕೂಟ ನಡೆಯಲಿದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಡಿ.19 ರಿಂದ 23 ರವರೆಗೆ 5 ದಿನಗಳ ಕಾಲ ನಡೆಯಲಿರುವ 60 ನೇ 60ನೇ ಅಖಿಲ ಭಾರತ  ಪೊಲೀಸ್ ಕರ್ತವ್ಯ ಕೂಟದಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ವೃತ್ತಿಪರ ಕೌಶಲಗಳ ಜೊತೆಗೆ ಆಧುನಿಕ ತನಿಖಾ ಕ್ರಮಗಳ ಮೂಲಕ ಕ್ಲಿಷ್ಟ ಪ್ರಕರಣಗಳನ್ನು ಭೇದಿಸುವಲ್ಲಿ ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಕರ್ತವ್ಯ ಕೂಟದಲ್ಲಿ ವಿಶೇಷ ಪ್ರಸ್ತಾಪವಾಗಲಿದೆ ಎಂದರು. ಪೊಲೀಸ್ ಸಮೂಹಕ್ಕೆ ಸಮಾಜದಲ್ಲಿ ತನ್ನದೇ ಆದ ವಿಶೇಷ ಗೌರವವಿದೆ. ನಿರಂತರ ಒತ್ತಡದಲ್ಲೂ ಕಾಳಜಿ, ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಪ್ರತಿವರ್ಷ ನಡೆಯುವ ಕರ್ತವ್ಯ ಕೂಟ ತುಂಬಾ ಮಹತ್ವದ್ದಾಗಿದೆ. ಸಾರ್ವಜನಿಕ ನೆಮ್ಮದಿಯ ಬದುಕಿಗೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಗೆ ಇಂತಹ ಕೂಟಗಳ ಮೂಲಕ ಪ್ರತ್ಯೇಕ ವೇದಿಕೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಡಿ.19 ರಂದು ನಡೆಯುವ ಕರ್ತವ್ಯ ಕೂಟಕ್ಕೆ ರಾಜ್ಯಪಾಲ ವಜೂಭಾಯ್ ರೂಢಾಬಾಯ್ ವಾಲಾ ಚಾಲನೆ ನೀಡಿಲಿದ್ದಾರೆ. ಗೃಹಸಚಿವ ಡಾ.ಜಿ.ಪರಮೇ‍ಶ್ವರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರೋಪ ಭಾಷಣ ಮಾಡಲಿದ್ದು, ದೇಶದ ವಿವಿಧ ರಾಜ್ಯಗಳಿಂದ 1500 ಕ್ಕೂ ಹೆಚ್ಚು ಪೊಲೀಸರು, ಅಧಿಕಾರಿಗಳು ಮತ್ತು ನ್ಯಾಯಾಧೀಶರುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಪೊಲೀಸ್ ಕರ್ತವ್ಯ ಕೂಟವನ್ನು ಈ ಬಾರಿ ಮೈಸೂರಿನಲ್ಲಿ ಆಯೋಜಿಸಿರುವ ಜವಾಬ್ದಾರಿಯನ್ನು 6 ನೇ ಬಾರಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ವಹಿಸಲಾಗಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

 

Leave a Reply

comments

Related Articles

error: