ದೇಶ

ಕಪ್ಪುಹಣ ಬಿಳಿ ಮಾಡಿಕೊಳ್ಳಲು ಮಾರ್ಚ್ 31ರವರೆಗೆ ಅವಕಾಶ

ನವದೆಹಲಿ: ಕೇಂದ್ರ ಸರಕಾರ ಕಳೆದ ತಿಂಗಳು ಶೇ.50 ತೆರಿಗೆ ಕಟ್ಟಿ ಕಪ್ಪುಹಣ ಬಿಳಿ ಮಾಡಿಕೊಳ್ಳಲು ರೂಪಿಸಿದ್ದ ಹೊಸ ಕಾನೂನು ಡಿ.17ರಿಂದ ಜಾರಿಗೆ ಬರುತ್ತಿದ್ದು, ಕಾಳಧನಿಕರಿಗೆ ಹಣವನ್ನು ಬಿಳಿ ಮಾಡಿಕೊಳ್ಳಲು 2017ರ ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ.

ಕಪ್ಪುಹಣ ಘೋಷಣೆ ಯೋಜನೆಯಡಿ ಕನಿಷ್ಠ ಶೇ.50ರಷ್ಟು ದಂಡ ಕಟ್ಟಿ ಕಪ್ಪುಹಣವನ್ನು ಗೋಷಿಸಿಕೊಳ್ಳಬಹುದು. ಕಪ್ಪುಹಣ ಘೋಷಿಸಿದವರ ವಿವರವನ್ನು ಗೌಪ್ಯವಾಗಿಡುತ್ತೇವೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅವರು ಶುಕ್ರವಾರ ತಿಳಿಸಿದ್ದಾರೆ. ಜನ ಕಪ್ಪುಹಣ ಹೊಂದಿರುವವರ ಬಗ್ಗೆ [email protected] ಗೆ ಮಾಹಿತಿ ನೀಡಬಹುದೆಂದರು.

2016ರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಕಪ್ಪುಹಣವನ್ನು ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ತಮ್ಮ ಅಘೋಷಿತ ಕಪ್ಪುಹಣದ ಆದಾಯದ ಮೇಲೆ ಶೇ.50 ತೆರಿಗೆ ಪಾವತಿಸಬೇಕಾಗುವುದು. ಹೆಚ್ಚುವರಿಯಾಗಿ ಶೇ.10ರ ದಂಡ ಮತ್ತು ಶೇ.33ರ ಪ್ರಮಾಣದಲ್ಲಿ ಪಿಎಂಜಿಕೆ ಸೆಸ್ ಪಾವತಿಸಬೇಕಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸಂಸತ್ತಿನಲ್ಲಿ ಮಸೂದೆ ಮಂಡಿಸುವಾಗ ಹೇಳಿದ್ದರು.

Leave a Reply

comments

Related Articles

error: