ಪ್ರಮುಖ ಸುದ್ದಿ

ಪ್ರೊ.ಕೆ.ಎಸ್.ಭಗವಾನ್​ ಹತ್ಯೆಗೆ ಸಂಚು ಪ್ರಕರಣ : 9 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ತನಿಖಾ ತಂಡ

ರಾಜ್ಯ(ಬೆಂಗಳೂರು)ಜು.21:- ಸಾಹಿತಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್​ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಅಧಿಕಾರಿಗಳ ತಂಡ 9 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.

ದೋಷಾರೋಪ ಪಟ್ಟಿಯಲ್ಲಿ ವಿಜಯಪುರದ ರತ್ನಾಪುರ ಗ್ರಾಮದ ಮನೋಹರ್​ ಯಡವೆ ಸೇರಿ 9  ಆರೋಪಿಗಳ ವಿರುದ್ಧ ಚಾರ್ಜ್​ ಶೀಟ್ ​ಸಲ್ಲಿಕೆ ಮಾಡಿದ್ದು, ಒಟ್ಟು 671 ಪುಟಗಳ ದೋಷಾರೋಪ ಪಟ್ಟಿಯನ್ನು ಉಪ್ಪಾರಪೇಟೆ ಪೊಲೀಸರು ಸಲ್ಲಿಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪ ಹಾಗೂ ಹತ್ಯೆಗೆ ಸಂಚು ಆರೋಪದಡಿ ಗೌರಿ ಲಂಕೇಶ್​ ಪ್ರಕರಣದ ಪ್ರಮುಖ ಆರೋಪಿಗಳಾದ ಮದ್ದೂರು ಮೂಲದ ಕೆ.ಟಿ.ನವೀನ್​ ಕುಮಾರ್, ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್, ಮಹಾರಾಷ್ಟ್ರದ ಅಮೋಲ್ ಕಾಳೆ(ಬಾಯ್​ಸಾಬ್), ಅಮೀತ್​ ದೆಗ್ವೇಕರ್(ಪ್ರದೀಪ್) ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ಗೌರಿ ಹತ್ಯೆ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಮಾರಾಟ ಆರೋಪದಡಿ ಹೊಟ್ಟೆಮಂಜ ಬಂಧಿತನಾಗಿದ್ದು, ತನಿಖೆ ವೇಳೆ ಪ್ರೊ.ಕೆ.ಎಸ್.ಭಗವಾನ್​ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಬಾಯಿ ಬಿಟ್ಟಿದ್ದ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: