ದೇಶ

ದೆಹಲಿಯಲ್ಲಿ ದಟ್ಟವಾಗಿ ಆವರಿಸಿರುವ ಮಂಜು: 52 ರೈಲುಗಳ ಸಂಚಾರ ವಿಳಂಬ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶೀತಗಾಳಿ ಮತ್ತು ದಟ್ಟ ಮಂಜು ಆವರಿಸಿರುವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 52 ರೈಲುಗಳ ಸಂಚಾರ ವಿಳಂಬವಾಗಿದ್ದು, 12 ರೈಲುಗಳ ಸಂಚಾರದ ಸಮಯವನ್ನು ಬದಲಾವಣೆ ಮಾಡಲಾಗಿದೆ.

ಶನಿವಾರ ದೆಹಲಿಯಲ್ಲಿ ದಟ್ಟ ಮಂಜು ಕವಿದಿದ್ದು, ನಗರದ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ದೆಹಲಿಯ ರೈಲ್ವೆ ಸ್ಟೇಷನ್‍ನಲ್ಲಿ ಸಾವಿರಕ್ಕೂ ಅಧಿಕ ಪ್ರಯಾಣಿಕರು ರೈಲುಗಳ ಸಂಚಾರ ವಿಳಂಬದಿಂದ ಅತಂತ್ರರಾಗಿರುವುದು ಕಂಡುಬಂತು. ಗುರುವಾರದಂದು 55 ರೈಲುಗಳು ವಿಳಂಬವಾಗಿ ಆಗಮಿಸಿದ್ದು, 17 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿತ್ತು.

Leave a Reply

comments

Related Articles

error: