ಮೈಸೂರು

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಗಂಗೋತ್ರಿ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಮೈಸೂರು, ಜು.21:- ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಇತ್ತೀಚೆಗೆ ಮೈಸೂರಿನ ಗುರುಭವನದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ 14 ರಿಂದ 17ನೇ ವಯೋಮಿತಿಯ ಬಾಲಕ ಮತ್ತು ಬಾಲಕಿಯರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ನಗರದ ಬೋಗಾದಿ ಮುಖ್ಯ ರಸ್ತೆ, ಚರ್ಚ್ ಅಡ್ಡರಸ್ತೆ, ಮಾನಸ ಗಂಗೋತ್ರಿಯಲ್ಲಿರುವ ಗಂಗೋತ್ರಿ ಪ್ರೌಢಶಾಲೆ ಇಬ್ಬರು ವಿದ್ಯಾರ್ಥಿನಿಗಳಾದ ದರ್ಶಿನಿ ಸಿ.ಎಸ್., 58 ಕೆ.ಜಿಯ ಗುಂಪಿನಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಹಾಗೂ ಪ್ರಿಯಾ ಬಿ.ಎಸ್., 69 ಕೆಜಿಯ ಗುಂಪಿನಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಕ್ಷೇತ್ರ ಶಿಕ್ಷಣ ಇಲಾಖಾ ವತಿಯಿಂದ ಇತ್ತೀಚೆಗೆ ಮೈಸೂರಿನ  ಜೆಎಸ್‍ಎಸ್ ಫ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ 14 ರಿಂದ 17ನೇ ವಯೋಮಿತಿಯ ಬಾಲಕ ಮತ್ತು ಬಾಲಕಿಯರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ನಗರದ ಬೋಗಾದಿ ಮುಖ್ಯರಸ್ತೆ, ಚರ್ಚ್ ಅಡ್ಡ ರಸ್ತೆ, ಮಾನಸ ಗಂಗೋತ್ರಿಯಲ್ಲಿರುವ ಗಂಗೋತ್ರಿ ಪ್ರೌಢಶಾಲಾ ವಿದ್ಯಾರ್ಥಿಯಾದ ಹರೀಶ್ ಎಸ್. ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಈ ಮೂವರು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಶಾಲೆಯ ಅಧ್ಯಕ್ಷರಾದ ಟಿ.ರಂಗಪ್ಪ, ಆಡಳಿತಾಧಿಕಾರಿಯಾದ ಕಾಂತಿನಾಯಕ್‍ ಹಾಗೂ ದೈಹಿಕ ಶಿಕ್ಷಕಿಯರಾದ ಮಂಜುಳ, ರಶ್ಮಿ ಮತ್ತು ಶಿಕ್ಷಕ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: