ದೇಶಪ್ರಮುಖ ಸುದ್ದಿ

ವಿಶ್ವಾಸಮತ ಗೆದ್ದ ನಂತರ ಟ್ವಿಟ್ಟರ್ ಮೂಲಕ ಪ್ರಧಾನಿ ಕೃತಜ್ಞತೆ

ನವದೆಹಲಿ (ಜುಲೈ 21): ಲೋಕಸಭೆಯಲ್ಲಿ ವಿಶ್ವಾಸ ಮತ ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಕೃತಜ್ಞತೆ ಅರ್ಪಿಸಿದ್ದಾರೆ. ತಮ್ಮ ಪರವಾಗಿ ಮತ ಚಲಾಯಿಸಿದ ಎಲ್ಲ ಪಕ್ಷದ ಸಂಸದರಿಗೆ ಮತ್ತು ತಮ್ಮ ಸರ್ಕಾರದ ಮೇಲೆ ವಿಶ್ವಾಸ ಹೊಂದಿರುವ ಭಾರತದ 125 ಕೋಟಿ ಜನರಿಗೆ ನನ್ನ ಕೃತಜ್ಞತೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

NDA has the confidence of the Lok Sabha and the 125 crore people of India.

I thank all the parties that have supported us in the vote today. Our efforts to transform India and fulfil the dreams of our youth continue. Jai Hind!
— Narendra Modi (@narendramodi) July 20, 2018

“ಎನ್ ಡಿಎ ಸರ್ಕಾರವು ಲೋಕಸಭೆ ಮತ್ತು 125 ಕೋಟಿ ಜನರ ವಿಶ್ವಾಸ ಹೊಂದಿದೆ. ನಮಗೆ ಬೆಂಬಲ ನೀಡಿದ ಎಲ್ಲಾ ಪಕ್ಷಗಳಿಗೆ ನನ್ನ ಧನ್ಯವಾದಗಳು. ಭಾರತವನ್ನು ಬದಲಿಸುವ ಮತ್ತು ಯುವಕರ ಕನಸನ್ನು ನನಸಾಗಿಸುವ ನಮ್ಮ ಪ್ರಯತ್ನ ಮತ್ತೆ ಮುಂದುವರಿಯುತ್ತದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಜು.20 ರಂದು ನಡೆದ ವಿಶ್ವಾಸ ಮತ ನಿರ್ಣಯ ಪ್ರಕ್ರಿಯೆಯಲ್ಲಿ ಬಿಜೆಪಿ 325 ಮತ ಪಡೆದು ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಿತು. 2019 ರ ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರಕ್ಕೆ ಈ ಗೆಲುವು ಮಹತ್ವದ್ದೆನ್ನಿಸಿದೆ.(ಎನ್.ಬಿ)

Leave a Reply

comments

Related Articles

error: