
ಮೈಸೂರು
ಜು.22ರಂದು ಕೋಟಿ ವೃಕ್ಷ ಪ್ರತಿಷ್ಠಾನದಿಂದ ಹುಲ್ಲಳ್ಳಿಯಲ್ಲಿ ಗಿಡ ನೆಡುವ ಕಾರ್ಯಕ್ರಮ
ಮೈಸೂರು,ಜು.21 : ಕೋಟಿ ವೃಕ್ಷ ಪ್ರತಿಷ್ಠಾನ, ಐಕ್ಯೂಪ್ಲನ್ ಅಕಾಡೆಮಿ ವತಿಯಿಂದ ಬೀಜ ನೆಡಸುವ ಹಬ್ಬವನ್ನು ಜು.22ರ ನಂಜನಗೂಡಿನ ಹುಲ್ಲಳ್ಳಿಯಲ್ಲಿ ನಡೆಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ್ ಭಟ್ ತಿಳಿಸಿದರು.
ಅಂದು ಮಧ್ಯಾಹ್ನ 2.30 ರಿಂದ ಹುಲ್ಲಳ್ಳಿಯಲ್ಲಿ ಸುಮಾರು ಸಾವಿರ ಗಿಡ ನೆಡಲಿದ್ದು ಮುಂದಿನ ದಿನಗಳಲ್ಲಿ ಕೋಟಿ ಗಿಡ ನೆಡುವ ಗುರಿ ಹೊಂದಲಾಗಿದೆ, ಅಲ್ಲದೇ ಪ್ರತಿಷ್ಠಾನದವತಿಯಿಂದ ಪ್ರತಿ ಭಾನುವಾರ ಸಸ್ಯ ಬೆಳಸುವ ಚಟುವಟಿಕೆ ನಡೆಸುತ್ತಿದ್ದು. ಸಂಸ್ಥೆಯಿಂದ ಉತ್ಪಾದಿಸಿದ ಗಿಡಗಳನ್ನು ಬೇಡಿಕೆ ಬಂದಲ್ಲಿ ಉಚಿತವಾಗಿ ವಿತರಿಸಲಾಗುವುದು. ಈಗಾಗಲೇ ಮೂರು ಸಾವಿರ ಗಿಡಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ತಮ್ಮ ಸಂಸ್ಥೆಗೆ ಸ್ವಯಂ ಸೇವಕರ ಅವಶ್ಯವಿದ್ದು ಆಸಕ್ತರು ಬಂದು ಕೈಜೋಡಿಸಬಹುದು ಎಂದು ಮನವಿ ಮಾಡಿ, ಸುಲಭವಾಗಿ ನಿರ್ವಹಿಸಲು ಸಾಧ್ಯವಾದಂತ ಸ್ಥಳಗಳಲ್ಲಿಯೂ ಮಾತ್ರ ಗಿಡ ನೆಡುತ್ತಿದ್ದು, ಹಸು ಮತ್ತು ಇತರೆ ಪ್ರಾಣಿಗಳು ಸೇವಿಸದಿರುವಂತಹ ಬೇವು, ಹಲಸು, ಮಾವು, ಹೊಂಗೆ, ಬನ್ನಿ ಸೇರಿದಂತೆ ಸುಮಾರು 15 ವಿವಿಧ ಬಗೆಯ ಸಸ್ಯಗಳನ್ನು ಉತ್ಪಾದಿಸಲಾಗುತ್ತಿದೆ. ಈ ಉತ್ಪಾದಿಸಿದ ಸಸಿಗಳನ್ನು ತಾಲ್ಲೂಕಿನಾಧ್ಯಂತ ಹಂತ ಹಂತವಾಗಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನಾಳೆ ನೆಡುವ ಗಿಡಗಳನ್ನು ಪೋಷಿಸುವ ಬಗ್ಗೆ ಹುಲ್ಲಳ್ಳಿಯ ರೈತರು ಆಶ್ವಾಸನೆ ನೀಡಿದ್ದು, ಇದರಿಂದಾಗಿ ಕೇವಲ ಹೊಂಗೆ ಸಸಿಗಳನ್ನು ನೆಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯದರ್ಶಿ ವೆಂಕಟೇಶ್, ಪುರುಷೋತ್ತಮ್, ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಸಂಶೋಧನೆ ಹಾಗೂ ಅಧ್ಯಯನ ಸಂಸ್ಥೆ ಅಧ್ಯಕ್ಷ ಆ ಮ ಭಾಸ್ಕರ್, ಲಯನ್ಸ್ ಸಂಸ್ಥೆಯ ಅರುಣ್ ಕುಮಾರ್, ರಾಮಚಂದ್ರ ಭಟ್, ಉತ್ತರ ಕರ್ನಾಟಕ ಸಾಂಸ್ಕೃತಿಕ ಸಂಘದ ಡಾ.ರಾಮ್ ಪ್ರಕಾಶ್, ಎನ್.ಐ.ಇ ಕಾಲೇಜಿನ ಡಾ.ಅನ್ನಪೂರ್ಣ ಗೋಷ್ಠಿಯಲ್ಲಿ ಇದ್ದರು. (ಕೆ.ಎಂ.ಆರ್)