ಸುದ್ದಿ ಸಂಕ್ಷಿಪ್ತ

ಆಧುನಿಕ ನಾಟಕಗಳಲ್ಲಿ ಸಾಮಾಜಿಕ ಪ್ರಜ್ಞೆ ಕುರಿತು ವಿಚಾರ ಸಂಕಿರಣ

ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಂಗಳೂರು – ಇವರ ಸಂಯುಕ್ತಾಶ್ರಯದಲ್ಲಿ “ಆಧುನಿಕ ನಾಟಕಗಳಲ್ಲಿ ಸಾಮಾಜಿಕ ಪ್ರಜ್ಞೆ” ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಕಾರ್ಯಕ್ರಮವು ಡಿ.18, ಭಾನುವಾರ ಬೆಳಗ್ಗೆ 10.30ಕ್ಕೆ ಅರಮನೆ ಹಿಂಭಾಗ ಕನ್ನಡ ಸಾಹಿತ್ಯ ಪರಿಷತ್‍ ನಲ್ಲಿ ನಡೆಯಲಿದೆ.

ರಂಗ ಚಿಂತಕ ಕೆ.ವೈ. ನಾರಾಯಣಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಂಗ ನಿರ್ದೇಶಕರಾದ ಪ್ರೊ. ಎಸ್.ಆರ್. ರಮೇಶ್  ಅವರು ಅಧ್ಯಕ್ಷತೆ ವಹಿಸುವರು. ಸಂಸ್ಕೃತಿ ಚಿಂತಕರಾದ ಪ್ರೊ. ಚ. ಸರ್ವಮಂಗಳ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾದ ಬಿ. ಮಹೇಶ್ ಹರವೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಂಸ್ಕೃತಿ ಚಿಂತಕ ಅಪೂರ್ವ ‘ಡಿ’ ಸಿಲ್ವ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ರಾಜಶೇಖರ ಕದಂಬ, ಕುಮಾರಸ್ವಾಮಿ, ಕೆ.ಆರ್. ಸುಮತಿ, ಉದಯ್ ಕುಮಾರ್, ಯೋಗಾನಂದ, ಟಿ. ತಾಂಡವಮೂರ್ತಿ, ಕು|| ಕಾತ್ಯಾಯಿನಿ ಭಾವಹಿಸುವರು.

Leave a Reply

comments

Related Articles

error: