
ಪ್ರಮುಖ ಸುದ್ದಿಮೈಸೂರು
ಸಿಟ್ಟಿಂಗ್ ಪ್ಯಾರಾ ವಾಲಿಬಾಲ್ ಗೆ ಚಾಲನೆ
ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ 6ನೇ ಸೀನಿಯರ್ ಸಿಟ್ಟಿಂಗ್ ಪ್ಯಾರಾ ವಾಲಿಬಾಲ್ ನ್ಯಾಶನಲ್ ಚಾಂಪಿಯನ್ಶಿಪ್
ಗೆ ಶನಿವಾರ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಫಾರ್ ಫಿಸಿಕಲ್ ಛಾಲೆಂಜ್ಡ್, ಪ್ಯಾರಾ ಒಲಂಪಿಕ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಅಂಗವಿಕಲರಿಗಾಗಿ ನಡೆಯುತ್ತಿರುವ ಸಿಟ್ಟಿಂಗ್ ಪ್ಯಾರಾ ವಾಲಿಬಾಲ್ ಪಂದ್ಯಾವಳಿಗೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ತಾವೇ ಸ್ವತಃ ವಾಲಿಬಾಲ್ ಆಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮೈಸೂರಿಗೆ ಮತ್ತೊಮ್ಮೆ ಆಯೋಜನೆ ಸಿಕ್ಕಿರುವುದು ಸಂತಸ ತಂದಿದೆ. ವಿಶೇಷ ಚೇತನರಿಗೆ ಆತ್ಮವಿಶ್ವಾಸ, ಆತ್ಮ ಸ್ಥೈರ್ಯ ಜಾಸ್ತಿ. ಅವರು ಮಾನಸಿಕವಾಗಿ ಸದೃಢರಾಗಿರುತ್ತಾರೆ ಎಂದರಲ್ಲದೇ ಸರ್ಕಾರ ನೀಡುವ ವಿಶೇಷ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಸಿಐಐ ಮೈಸೂರು ವಲಯಾಧ್ಯಕ್ಷ ಡಾ. ಮುತ್ತುಕುಮಾರ್ ಮಾತನಾಡಿ, ವಿಕಲಚೇತನರು ದೇವರ ಮಕ್ಕಳು. ಅವರಲ್ಲಿರುವ ಆತ್ಮವಿಶ್ವಾಸ ನಮ್ಮಲ್ಲಿಯೂ ಇಲ್ಲ. ಎಲ್ಲವೂ ಸರಿ ಇದ್ದು ನಮ್ಮಿಂದ ಏನೂ ಮಾಡಲು ಸಾಧ್ಯವಾಗದಿರುವುದಕ್ಕೆ ನಾಚಿಕೆ ಎನಿಸುತ್ತದೆ. ಅವರು ಮೈಸೂರಿಗೆ ಬಂದಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಕರ್ನಾಟಕದ ಉಪಾಧ್ಯಕ್ಷ ರೋಶನ್ ಅಲಿ, ಪಿಸಿಐ ಸ್ಥಾಪಕ ಕಾರ್ಯದರ್ಶಿ ಮಹಾದೇವ, ಪ್ಯಾರಾ ಒಲಂಪಿಕ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಹೆಚ್. ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
15 ರಾಜ್ಯಗಳಿಂದ ಆಗಮಿಸಿದ ಸುಮಾರು 225 ಮಂದಿ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ.