ದೇಶಪ್ರಮುಖ ಸುದ್ದಿ

ಲೋಕಸಭೆಯಲ್ಲಿ ಪ್ರಧಾನಿ ಭಾಷಣ ನಾಟಕೀಯ : ಮಲ್ಲಿಕಾರ್ಜುನ್ ಖರ್ಗೆ ಟೀಕೆ

ನವದೆಹಲಿ (ಜುಲೈ 21): ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಗೆದ್ದಿರಬಹುದು, ಆದರೆ ಪ್ರಧಾನಿ ಮೋದಿ ಅವರ ಭಾಷಣ ಅತಿ ದೊಡ್ಡ ಡ್ರಾಮಾ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಸಂಸತ್ ಕಲಾಪದ ಬಳಿಕ ಮಾತನಾಡಿದ ಖರ್ಗೆ, ನಾವು ಪ್ರಧಾನಿ ಮೋದಿ ಅವರ ಬಳಿ ರಫೆಲ್ ಒಪ್ಪಂದ, ನೀರವ್ ಮೋದಿ ಪ್ರಕರಣಕ್ಕೆ ಸೇರಿದಂತೆ ಹಲವು ಹಗರಣಗಳ ಬಗ್ಗೆ ಪ್ರಶ್ನೆ ಮಾಡಿದ್ದೇವೆ. ಆದರೆ, ಪ್ರಧಾನಿ ಅವರು ಯಾವುದಕ್ಕೂ ಸ್ಪಷ್ಟ ಉತ್ತರ ನೀಡಿಲ್ಲ. ಪ್ರಧಾನಿ ಮೋದಿ ಮಾಡಿದ ಭಾಷಣ ನಾಟಕಮಯವಾಗಿತ್ತು ಎಂದು ಟೀಕಿಸಿದ್ದಾರೆ.

ಮೋದಿ ಅವರು ಆಂಧ್ರ ಪ್ರದೇಶದ ಜನರ ಬಗ್ಗೆಯೂ ಭಾಷಣದಲ್ಲಿ ಏನೂ ಮಾತನಾಡಲಿಲ್ಲ. ಕೇವಲ ಹಿಂದಿನ ಸರ್ಕಾರಗಳು ಏನು ಮಾಡಿದ್ದವು ಅನ್ನೋದರ ಬಗ್ಗೆಯಷ್ಟೇ ಬಾಣ ಬಿಡ್ತಿದ್ರು, ಈ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧತೆ ಹೇಳಿಕೊಳ್ಳುವಂಥದ್ದಲ್ಲ ಎಂದು ಖರ್ಗೆ ಅವರು ಆರೋಪಿಸಿದರು. (ಎನ್.ಬಿ)

Leave a Reply

comments

Related Articles

error: