ಸುದ್ದಿ ಸಂಕ್ಷಿಪ್ತ

ಆರೋಗ್ಯ ಕಾಳಜಿ ಕುರಿತ ಉಪನ್ಯಾಸ ಸರಣಿ

ನ.ಕ.ಮೇ – ನಟನ ಕಲಾ ಮೇಳ ಸಾಂಸ್ಕೃತಿಕ ವೇದಿಕೆ ಆಶ್ರಯ, ನಾರಾಯಣಾಮೃತ ಫೌಂಡೇಷನ್ ಮತ್ತು ಹಿರಿಯ ನಾಗರಿಕ ಸೇವಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಉಪನ್ಯಾಸ ಮಾಲಿಕೆ ಅಂಗವಾಗಿ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಮೇಲೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಡಿ.18, ಭಾನುವಾರ ಸಂಜೆ 6 ಗಂಟೆಗೆ ಮೈಸೂರಿನ ಹೆಬ್ಬಾಳ 2ನೇ ಹಂತದಲ್ಲಿರುವ “ಸಾಧನ” # 1588, “ಆಶ್ರಯ”, ನಾರಾಯಣಾಮೃತ ಫೌಂಡೇಷನ್‍ ನಲ್ಲಿ ಕಾರ್ಯಕ್ರಮ ಆರಂಭವಾಗಲಿದೆ.

“ಆರೋಗ್ಯಕ್ಕಾಗಿ ಹೋಮಿಯೋಪತಿ” ವಿಷಯದ ಕುರಿತು ಮೈಸೂರು ವಿವಿ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್‍.ಎನ್‍. ಅಚ್ಯುತ ಅವರು ವಿಷಯ ಮಂಡಿಸುವರು.

“ಆರೋಗ್ಯಕ್ಕಾಗಿ ಆಹಾರ” ಕುರಿತ ವಿಷಯದ ಮೇಲೆ ಮೈಸೂರು ವಿವಿ ಯುವರಾಜ ಕಾಲೇಜು ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ವಿಭಾಗದ ಮುಖ್ಯಸ್ಥ ಡಾ. ಆರ್. ಶೇಖರ್ ನಾಯಕ್ ಅವರು ಮಾತನಾಡಲಿದ್ದಾರೆ.

Leave a Reply

comments

Related Articles

error: