ಮನರಂಜನೆ

ಜಾಹ್ನವಿ ಕಪೂರ್ ಅಭಿನಯದ ಬಗ್ಗೆ ಅರ್ಜುನ್ ಕಪೂರ್ ಹೇಳಿದ್ದೇನು.?

ಮುಂಬೈ,ಜು.21-ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಮೊದಲ ಸಿನಿಮಾ `ದಡಕ್’ ಸಿನಿಮಾ ದೇಶದಾದ್ಯಂತ ಬಿಡುಗಡೆಯಾಗಿದೆ. ಕಪೂರ್ ಕುಟುಂಬದವರು ಚಿತ್ರ ಹಾಗೂ ಜಾಹ್ನವಿ ಅಭಿನಯವನ್ನು ನೋಡಿ ಸಂತಸಗೊಂಡಿದ್ದಾರೆ.

ಜಾಹ್ನವಿ ಕಪೂರ್ ಅಭಿನಯದ ಬಗ್ಗೆ ನಟ ಅರ್ಜುನ್ ಕಪೂರ್ ಟ್ವಿಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೃದಯ ಬಡಿತವನ್ನ ಹೆಚ್ಚಿಸುವ ಲವ್ ಸ್ಟೋರಿ ಇದು. ನಿರ್ದೇಶಕ ಶಶಾಂಕ್ ಇಶಾನ್ ಮತ್ತು ಜಾಹ್ನವಿ ಇಬ್ಬರಿಂದಲೂ ಅದ್ಭುತವಾದ ಅಭಿನಯವನ್ನ ಹೊರತೆಗೆದಿದ್ದಾರೆ. ಇಶಾನ್ ಸಾಧಾರಣ ಯುವಕನ ಪಾತ್ರದಲ್ಲಿ ಮನಮೆಚ್ಚುವಂತೆ ನಟಿಸಿದ್ದಾರೆ. ಇನ್ನು ಸ್ವಚ್ಛವಾದ ಪ್ರೇಮಕಥೆಯಲ್ಲಿ ಸಹೋದರಿ ಜಾಹ್ನವಿ ಕಪೂರ್ ನಟನೆ ಮೂಕವಿಸ್ಮಿತಗೊಳಿಸಿದೆ ಎಂದು ಟ್ವಿಟ್ ಮಾಡಿದ್ದಾರೆ.

ಈ ಹಿಂದೆ ಸಿನಿಮಾದ ಟ್ರೈಲರ್ ಬಿಡುಗಡೆಯಾದಗಲೂ ಜಾಹ್ನವಿ ಬಗ್ಗೆ ಅರ್ಜುನ್ ಕಪೂರ್ ಪ್ರಶಂಸೆಯ ಮಾತುಗಳನ್ನಾಡಿದ್ದರು. ಈಗ ಸಿನಿಮಾ ನೋಡಿದ ಮೇಲೆಯೂ ಮೆಚ್ಚಿಕೊಂಡಿದ್ದಾರೆ.

ಮರಾಠಿಯ ಸೂಪರ್ ಹಿಟ್ ಸಿನಿಮಾ `ಸೈರಾಟ್’ ಚಿತ್ರದ ರೀಮೇಕ್ ದಡಕ್. ಚೊಚ್ಚಲ ಚಿತ್ರದಲ್ಲೇ ಶ್ರೀದೇವಿ ಪುತ್ರಿ ಬಾಲಿವುಡ್ ಗಮನ ಸೆಳೆದಿದ್ದಾರೆ. ಇದು ಸಹಜವಾಗಿ ಶ್ರೀದೇವಿ ಕುಟುಂಬಕ್ಕೆ ಸಂತಸ ತಂದಿದೆ. (ಎಂ.ಎನ್)

Leave a Reply

comments

Related Articles

error: