ಸುದ್ದಿ ಸಂಕ್ಷಿಪ್ತ

ಪುಸ್ತಕ ಬಿಡುಗಡೆ ಸಮಾರಂಭ

ಅಪ್ರವರಂಬೆ – ಸಪ್ತಸ್ವರ – ಸಂವಹನ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಡಿ.18 ರ ಭಾನುವಾರ ಸಂಜೆ 5 ಗಂಟೆಗೆ ರಾಮಕೃಷ್ಣ ನಗರದ ನೃಪತುಂಗ ಕನ್ನಡಶಾಲೆಯಲ್ಲಿ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಪ್ರೊ. ಬಿ. ಸೋಮಶೇಖರಪ್ಪ ಅವರು ಬರೆದಿರುವ “ವಿಶ್ವಬಂಧು” ಕಾದಂಬರಿ ಮತ್ತು ಸಂವಹನದ ಪ್ರಕಾಶಕರಾದ ದಾಕ್ಷಾಯಣಿ ಸೋಮಶೇಖರ್ ಅವರು “ತಾಜಮಹಲಿನ ಟೆಂಡರ್” ನಾಟಕ ಕೃತಿ ಬಿಡುಗಡೆಗೊಳ್ಳಲಿರುವ ಪುಸ್ತಕಗಳು.

ಪ. ಮಲ್ಲೇಶ್ ಅವರು ಅಧ್ಯಕ್ಷತೆ ವಹಿಸಲಿದ್ದು, ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರು ಪುಸ್ತಕಗಳ ಬಿಡುಗಡೆ ಮಾಡುವರು. ಪುಸ್ತಕಗಳ ಕುರಿತು ಪ್ರೊ. ಬಿ.ವಿ. ವಸಂತಕುಮಾರ್ ಮತ್ತು ಡಾ. ತಿಪ್ಪೇಸ್ವಾಮಿ ಅವರು ಮಾತನಾಡಲಿದ್ದಾರೆ. ಡಿ.ಎನ್. ಲೋಕಪ್ಪ, ನಾ. ನಾಗಚಂದ್ರ ಅವರು ಉಪಸ್ಥಿತರಿರುವರು.

Leave a Reply

comments

Related Articles

error: