ಮೈಸೂರು

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ : ಇಬ್ಬರ ಬಂಧನ. 4,450 ನಗದು ವಶ

ಮೈಸೂರು,ಜು.21:- ಮೈಸೂರು ನಗರ  ಸಿ.ಸಿ.ಬಿ. ಪೊಲೀಸರು ಮಾಹಿತಿ ಮೇರೆಗೆ ಮೈಸೂರು ನಗರ ಕುವೆಂಪುನಗರ ಪೊಲೀಸ್ ಠಾಣಾ ಸರಹದ್ದು, ದಟಗಳ್ಳಿ 3ನೇ ಹಂತ, ಮಹಾಮನೆ ವೃತ್ತ, 4ನೇ ಮೇನ್, 2ನೇ ಕ್ರಾಸ್ # 2795 ರ ಮನೆ ಮೇಲೆ ದಾಳಿ  ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಹಾಲಿ   ದಟಗಳ್ಳಿ, 3ನೇ ಹಂತದಲ್ಲಿ ವಾಸವಿರುವ ಪಿ.ಟಿ. ಸಂದೇಶಕುಮಾರ್ ಬಿನ್ ತಿಮ್ಮಣ್ಣ, (26 ), ಪಾಲಹಳ್ಳಿ, ಶ್ರೀರಂಗಪಟ್ಟಣ ತಾಲೂಕು, ಮಂಡ್ಯ ಜಿಲ್ಲೆ , ಮಹದೇವು ಬಿನ್ ರಾಮಣ್ಣ, (33) ನಾಡಪ್ಪನಹಳ್ಳಿ, ಗದ್ದಿಗೆ ಪಕ್ಕ, ಬಿಳಿಕೆರೆ ಹೋಬಳಿ, ಹುಣಸೂರು ತಾಲೂಕು ಎಂದು ಗುರುತಿಸಲಾಗಿದ್ದು,  ದಸ್ತಗಿರಿ ಮಾಡಿ ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 4,450ರೂ. ಮತ್ತು  2 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದು ಓರ್ವ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ.  ಡಾ. ವಿಕ್ರಂ ವಿ  ಅಮ್ಟೆ   ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ.  ಬಿ.ಆರ್. ಲಿಂಗಪ್ಪ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್‍ಪೆಕ್ಟರ್‍  ಎಂ.ಸಿ. ರಾಜಶೇಖರ್ ವಿಶೇಷ ಪೊಲೀಸ್ ಅಧಿಕಾರಿ & ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ನಿರೀಕ್ಷಕರಾದ ವಿವೇಕಾನಂದ ಮತ್ತು ಸಿ.ಸಿ.ಬಿ.ಯ ಎಎಸ್‍ಐ  ಜವರೇಗೌಡ, ಎಎಸ್‍ಐ ಆರ್. ನಾಗೂಬಾಯಿ, ಸಿಬ್ಬಂದಿಗಳಾದ ಕೃಷ್ಣೇಗೌಡ, ಪಿ. ರವಿಕುಮಾರ, ನಾಗರಾಜು, ಕುಮಾರ,  ಮಂಜುಳಾ, ವಿ. ಮಂಜುನಾಥರವರುಗಳು ನಡೆಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: