ಮೈಸೂರು

ರಾತ್ರೋರಾತ್ರಿ ಲೇಡಿಸ್ ಹಾಸ್ಟೇಲ್ ಗೆ ನುಗ್ಗಿದ   ಸೈಕೋ : ದಾಂದಲೆ ಮಾಡಿ ಎಸ್ಕೇಪ್

ಮೈಸೂರು,ಜು.22:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೈಕೋ ಕಳ್ಳನೋರ್ವ ಸಂಚರಿಸುತ್ತಿದ್ದು, ರಾತ್ರೋರಾತ್ರಿ ಲೇಡಿಸ್ ಹಾಸ್ಟೇಲ್ ಗೆ ನುಗ್ಗಿ  ದಾಂದಲೆ ಮಾಡಿ ಎಸ್ಕೇಪ್ ಆದ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೆ ಆರ್ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಘಟನೆ ನಡೆದಿದ್ದು, ಮೂರಂತಸ್ತಿನ ನರ್ಸಿಂಗ್ ಹಾಸ್ಟೆಲ್ ಕಟ್ಟಡ ಏರಿ ಒಳ ನುಗ್ಗಿ ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸಿದ್ದಾನೆ. ವಿದ್ಯಾರ್ಥಿನಿ ರೂಂಗೆ ತಡ ರಾತ್ರಿ ನುಗ್ಗಿ ಮೊಬೈಲ್ ಕಸಿದು ಕೊಂಡಿದ್ದು, ಸೈಕೊ ಕಳ್ಳನ ಕೃತ್ಯ ನೋಡಿದ ವಿದ್ಯಾರ್ಥಿನಿಯ ಕತ್ತು ಹಿಸುಕಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.  ಸೆಕ್ಯೂರಿಟಿ, ಸಿಸಿಟಿವಿ ಇದ್ದರೂ ಲೆಕ್ಕಿಸದೆ ಆಳೆತ್ತರದ ಕಾಂಪೌಂಡ್ ಹಾರಿದ್ದ. ಕಳೆದ 20ರಂದು ಬೆಳಗಿನ ಜಾವ ಸುಮಾರು ಮೂರು ಗಂಟೆಯವರೆಗೂ ಹಾಸ್ಟೆಲ್ ಸರೌಂಡಿಂಗ್ ನಲ್ಲಿದ್ದ .ಹಾಸ್ಟೆಲ್ ಒಳ ಭಾಗದಲ್ಲಿ ಒಣಗಿ ಹಾಕಿದ್ದ   ಒಳುಡುಪುಗಳನ್ನು ಮೈಗೆ ಉಜ್ಜಿಕೊಂಡಿದ್ದಾನೆ ಎನ್ನಲಾಗಿದೆ.  ಸೈಕೊ ವರ್ತನೆಗೆ ನರ್ಸಿಂಗ್ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿರುವ ನರ್ಸಿಂಗ್ ಹಾಸ್ಟೆಲ್ ಇದಾಗಿದ್ದು, ಸುಮಾರು 30 ವರ್ಷ ಇತಿಹಾಸವಿರುವ ಕೆ ಆರ್ ಆಸ್ಪತ್ರೆಯ ನರ್ಸಿಂಗ್ ಹಾಸ್ಟೆಲ್‌ ಹಿಂಭಾಗದಿಂದ ಕಾಂಪೌಂಡ್ ಹಾರಿ ಬಂದಿದ್ದು, ಕಳೆದ  ವರ್ಷ ಸಹ ಇದೇ ರೀತಿ ಘಟನೆ ನಡೆದಿತ್ತು ಎನ್ನಲಾಗಿದೆ. ಆಗ ಹಾಸ್ಟೆಲ್ ನಲ್ಲಿ‌ ಸಿಸಿಟಿವಿ ಹಾಕಿರಲಿಲ್ಲ ಘಟನೆ ನಡೆದ ಬಳಿಕ ವಿಚಾರ ತಿಳಿಯುತಿದ್ದಂತೆ ಎಚ್ಚೆತ್ತುಕೊಂಡ ನರ್ಸಿಂಗ್ ವಿದ್ಯಾರ್ಥಿಗಳ ಹಾಸ್ಟೇಲ್ ನ ಆಡಳಿತ ಮಂಡಳಿ ಸಿಸಿಟಿವಿ ಅಳವಡಿಸಿದ್ದರು. ಇದೀಗ ಸೈಕೋ  ಕಳ್ಳನ  ವಿಚಾರ ತಿಳಿದು ಸೂಕ್ತ ಕ್ರಮಕ್ಕೆ‌ಮುಂದಾಗಿದೆ. ಇಬ್ಬರು ಸೆಕ್ಯೂರಿಟಿಯ ಭದ್ರತೆಯನ್ನು ಒದಗಿಸಲಾಗಿದೆ. ಸೈಕೊ ಕಳ್ಳ ಮುಟ್ಟಿ ಕದಲಿಸಿದರೂ ಹಾಸ್ಟೆಲ್ ಸೆಕ್ಯೂರಿಟಿ ಗಾರ್ಡ್ ಎಚ್ಚರಗೊಳ್ಳದೇ ಮಲಗಿದ್ದ ಎನ್ನಲಾಗಿದ್ದು, ಸೈಕೋ ಸೆಕ್ಯೂರಿಟಿ ಗಾರ್ಡ್ ಕ್ಯಾಪ್ ಹಾಕಿಕೊಂಡು ಹಾಸ್ಟೆಲ್ಗೆ ನುಗ್ಗಿದ್ದ. ಖಾಕಿ ಬಟ್ಟೆ ಹಾಕಿಕೊಂಡಿದ್ದ ಸೈಕೊ ಮದ್ಯದ ನಶೆಯಲ್ಲಿದ್ದ ಎನ್ನುತ್ತಿದ್ದಾರೆ ಹಾಸ್ಟೆಲ್ ವಿದ್ಯಾರ್ಥಿನಿಯರು. ಪ್ರಕರಣ ದಾಖಲು ಮಾಡಿಕೊಂಡಿರುವ ದೇವರಾಜ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: