ಮೈಸೂರು

ಖಾಸಗಿ ಬ್ಯಾಂಕ್ ಸಾಲಮನ್ನಾ ಮಾಡಿಸಿ : ಪ್ರತಿಭಟನೆ

ಖಾಸಗಿ ಬ್ಯಾಂಕ್ ಗಳ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಮೇಟಗಳ್ಳಿ ಮತ್ತು ಬಿಎಂಶ್ರೀ ನಗರದ ನಿವಾಸಿ ಮಹಿಳೆಯರು ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು  ಪ್ರತಿಭಟನೆ ನಡೆಸಿದ ಮೇಟಗಳ್ಳಿ ಮತ್ತು ಬಿಎಂಶ್ರೀ ನಗರದ ನಿವಾಸಿ ಮಹಿಳೆಯರು ಮಾತನಾಡಿ ಪ್ರಧಾನಿ ನರೇಂದ್ರಮೋದಿಯವರು ದಿಢೀರನೆ ಪ್ರಕಟಿಸಿದ ಹೊಸ ಆರ್ಥಿಕ ನೀತಿಯಿಂದ ಧ್ರಮಿಕ ವರ್ಗದ ಎಲ್ಲಾ ಜಾತಿಯ  ಬಡವರು, ಕೃಷಿಕಾರ್ಮಿಕರು, ರೈತರು, ಶೋಷಿತ ವರ್ಗದವರು ಕಂಗಾಲಾಗಿದ್ದಾರೆ. ದಿನನಿತ್ಯದ ಆಹಾರಕ್ಕೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಸಾರದ ಪೋಷಣೆಗಾಗಿ ಮೈಸೂರು ನಗರ ಹಾಗೂ ತಾಲೂಕು ವಿಭಾಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಬ್ಯಾಂಕ್ ಗಳಲ್ಲಿ ಎಲ್ಲಾ ಜಾತಿಯ ಬಡ ಮಹಿಳೆಯರು ಕೈಸಾಲ ಮಾಡಿಕೊಂಡಿದ್ದು, ಆರ್.ಬಿ.ಐನ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿ ಮಹಿಳಾ ಗ್ರಾಹಕರಿಂದ ಅಧಿಕ ಬಡ್ಡಿ ವಸೂಲಿ ಮಾಡುವ ಮೂಲಕ ಬಡವರ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿದರು.

ಎಲ್ಲಾ ಖಾಸಗಿ ಬ್ಯಾಂಕ್ ಗಳಲ್ಲಿ ಎಲ್ಲಾ ಜಾತೀಯ ಮಹಿಳೆಯರು ಪಡೆದುಕೊಂಡಿರುವ ಅಲ್ಪಮೊತ್ತದ ಸಾಲವನ್ನು ಆರ್.ಬಿ.ಐ ನೀತಿಗೆ ಅನುಗುಣವಾಗಿ ಕೂಲಿಕಾರ್ಮಿಕ ಬಡವರ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದಲ್ಲಿ ನಮಗೆ ಮೂರು ತಿಂಗಳು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ 300ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು.

Leave a Reply

comments

Related Articles

error: