ಮೈಸೂರು

ಗೃಹರಕ್ಷಕ ದಳದ ಸಿಬ್ಬಂದಿಗೆ ಸ್ಕೂಟರ್ ಡಿಕ್ಕಿ

ಮೈಸೂರು,ಜು.23:- ಸಂಚಾರ ನಿಯಮ ಉಲ್ಲಂಘನೆ ಕುರಿತು ತಪಾಸಣೆ ನಡೆಸುತ್ತಿದ್ದಾಗ ಗೃಹರಕ್ಷಕ ದಳದ ಸಿಬ್ಬಂದಿಯೋರ್ವರು ಸ್ಕೂಟರ್  ಡಿಕ್ಕಿಯಾಗಿ ಗಾಯಗೊಂಡ ಘಟನೆ ಕುವೆಂಪುನಗರ ಸಂಚಾರಿ ಪೊಲೀಸ್ ಠಾಣೆ ಎದುರು ನಡೆದಿದೆ.

ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ನಿಲ್ಲಿಸಲು ರಸ್ತೆ ಮಧ್ಯೆ ಹೋಮ್ ಗಾರ್ಡ್  ನಟೇಶ್ ಕುವೆಂಪುನಗರ ಸಂಚಾರ ಠಾಣೆಯ ಮುಂಭಾಗ ಎ.ಎಸ್.ಐ ಅವರ ಜೊತೆ ನಿಂತಿದ್ದಾಗ ದಕ್ಷಿಣೇಶ್ವರ ರಸ್ತೆಯಲ್ಲಿ ಉದಯರವಿ ರಸ್ತೆ ಕಡೆಯಿಂದ ಜುಪಿಟರ್ ಸ್ಕೂಟರ್ ಕೆಎ-55-ವಿ-1663 ರ ಸವಾರ ಹೆಲ್ಮೆಟ್ ಧರಿಸದೆ ಹಿಂಬದಿಯಲ್ಲಿ ಹೆಲ್ಮೆಟ್ ಹಾಕಿಕೊಂಡಿದ್ದ ಹುಡುಗಿಯನ್ನು ಕೂರಿಸಿಕೊಂಡು ಬರುತ್ತಿದ್ದು ಎ.ಎಸ್.ಐ ರವರು ಹೆಲ್ಮೆಟ್ ಧರಿಸದಿರುವ ಬಗ್ಗೆ ಸ್ಕೂಟರ್ ಸವಾರನಿಗೆ ನಿಲ್ಲಿಸಲು ಸೂಚನೆ ನೀಡುತ್ತಿದ್ದರು.

ಸ್ಕೂಟರ್ ಸವಾರ ವೇಗವಾಗಿ ಸವಾರಿ ಮಾಡಿಕೊಂಡು ಹೊರಟು ಹೋಗಿದ್ದು, ನಟೇಶ್ ಅವರಿಗೆ ಡಿಕ್ಕಿಯಾಗಿ ರಸ್ತೆಯ ಎಡಕ್ಕೆ ಬಿದ್ದಾಗ ಎಡಗೈಗೆ ಏಟಾಗಿದ್ದು ಸ್ಕೂಟರ್ ಸವಾರ ಸ್ಕೂಟರ್ ಸಮೇತ ಹೊರಟು ಹೋಗಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಅವರು ಸ್ಕೂಟರ್ ಸವಾರನ ವಿರುದ್ಧ ಕ್ರಮ ಜರುಗಿಸಲು ಕುವೆಂಪುನಗರ ಸಂಚಾರಿ ಠಾಣೆಗೆ ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: