ಕರ್ನಾಟಕ

ಸಂವಿಧಾನದಲ್ಲಿ ಇರುವಂತೆ ಎಲ್ಲರೂ ಸರಿ ಸಮವಾಗಿ ಒಟ್ಟಿಗೆ ಜೀವನ ನಡೆಸಬೇಕು : ಜಿ.ಬಸವರಾಜು

ರಾಜ್ಯ(ಚಾಮರಾಜನಗರ)ಜು.23:- ಜಿಲ್ಲಾ ಮಟ್ಟದ ವಿಕಲಚೇತನ ಮಕ್ಕಳ ಕಾರ್ಯಗಾರದ ಬಗ್ಗೆ ಮಾರ್ಗದರ್ಶಿ ಸಂಸ್ಥೆಯವರು ಬಹಳಷ್ಟು ಶ್ರಮ ವಹಿಸಿ ವಿಕಲಚೇತನರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ನಮ್ಮ ಭಾರತದ ಸಂವಿಧಾನದಲ್ಲಿ 26.01.1950ರಲ್ಲಿ ಜಾರಿಗೆ ಬಂತು. ಸಂವಿಧಾನದಲ್ಲಿ ಇರುವಂತೆ ಎಲ್ಲರೂ ಸರಿ ಸಮವಾಗಿ ಒಟ್ಟಿಗೆ ಜೀವನ ನಡೆಸಬೇಕು. ಎಂದು ಜಿಲ್ಲಾ ಸತ್ರ ನಾಯ್ಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಬಸವರಾಜು ತಿಳಿಸಿದರು.

ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮತ್ತು ಮಾರ್ಗದರ್ಶಿಸೇವಾ ಸಂಸ್ಥೆ ವತಿಯಿಂದ ಸೇವಾ ಭಾರತಿ ಆಂಗ್ಲ ಮಧ್ಯಮ ಶಾಲೆಯಲ್ಲಿ ನಡೆದ“ ಜಿಲ್ಲಾ ಮಟ್ಟದ ವಿಕಲಚೇತನ ಮಕ್ಕಳ ಹಕ್ಕುಗಳ ಕಾರ್ಯಾಗಾರವನ್ನು” ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಬಂದು 68ವರ್ಷವಾದರೂ ಸಂವಿಧಾನದ ಉದ್ದೇಶಗಳು ಸಂಪೂರ್ಣವಾಗಿ ಈಡೇರಿಲ್ಲ ಇಂತಹ ಸಂದರ್ಭದಲ್ಲಿ ಮಾರ್ಗದರ್ಶಿ ಸಂಸ್ಥೆಯು ಸಂವಿಧಾನದ ಉದ್ದೇಶಗಳನ್ನು ಈಡೇರಿಸಲು ಸಂಸ್ಥೆಗಳು ಮುಂದೆ ಬಂದಾಗ ಮಾತ್ರ ಸರ್ಕಾರದಿಂದ ವಿಕಲಚೇತನರಿಗೆ ಸಿಗಬೇಕಾದ ಸೌಲಭ್ಯ  ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬಹುದು ಎಂದರು.

ಜಿಲ್ಲೆಯ ದೂರದ ಪ್ರದೇಶವಾದ ರಾಮಪುರ, ಹನೂರು, ಮಹದೇಶ್ವರಬೆಟ್ಟ ಇನ್ನು ಮುಂತಾದ ಕಡೆ ಬಹಳ ಹಿಂದೂಳಿದ ಪ್ರದೇಶಗಳು ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಅವರಿಗೆ ಇನ್ನು ತಿಳಿದ್ದಿಲ್ಲ ಅ ಭಾಗ ಕಾಡುಗಳು ಅದಿವಾಸಿಗಳ ತರ ಜೀವನ ಸಾಗಿಸುತ್ತ ಬಂದಿದ್ದಾರೆ. ಇಂತಹ ಸಂಸ್ಥೆಗಳು ಮುಂದೆ ಬಂದು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ತಿಳಿಸಿ ಕೊಡಿಸುವಂತಹ ಕೆಲಸಗಳನ್ನು ಮಾಡಬೇಕಿದೆ. ಎಲ್ಲವನ್ನು ಸರ್ಕಾರವೇ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವಿಕಲಚೇತನರಿಗೆ,ಪರಿಶಿಷ್ಟ ಜಾತಿ ಮತ್ತು ವರ್ಗ ಯಾವುದೇ ಜಾತಿ ಇರಲಿ, ಆಸ್ತಿಗೆ ಸಂಬಂಧಿಸಿದಂತೆ ಯಾರಾದರೂ ಮೋಸ ಮಾಡಿದರೆ. ಮೋಸಕ್ಕೆ ಒಳಗಾದಂತಹ ವ್ಯಕ್ತಿಗಳು ನಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಎಂದರು.

ಜಿಲ್ಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಜೆ. ವಿಶಾಲಾಕ್ಷಿ ಅಂಗವಿಕಲತೆ ಶಾಪವಲ್ಲ ಅವರಲ್ಲೂ ಉತ್ತಮ ವಿದ್ಯಾಭ್ಯಾಸಮಾಡಿ ಉತ್ತಮ ದರ್ಜೆಯ ಅಧಿಕಾರಿಗಳು ಆಗಿದ್ದಾರೆ. ವಿಕಲಚೇತನ ಮಕ್ಕಳಿಗೆ ಉತ್ತಮವಾಗಿ ತರಬೇತಿ ನೀಡಿದರೆ ಅವರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿದರು.

ವಕೀಲ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹದೇವಪ್ಪ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: