ಸುದ್ದಿ ಸಂಕ್ಷಿಪ್ತ

ಆ.11-12ಕ್ಕೆ ಟಿಪ್ಪು ಸುಲ್ತಾನರ 226ನೇ ಉರುಸ್ ಕಾರ್ಯಕ್ರಮ

ಮಂಡ್ಯ (ಜುಲೈ 23): ಹಜರತ್ ಟಿಪ್ಪು ಸುಲಾನ್‍ರ 226ನೇ ಉರುಸ್-ಎ-ಷರೀಫ್ ಕಾರ್ಯಕ್ರಮವನ್ನು ಆಗಸ್ಟ್ 11 ಹಾಗೂ 12 ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಮ್‍ನ ಗುಂಬದ್-ಇ-ಶಾಹಿ ಯಲ್ಲಿ ಆಚರಿಸಲಾಗುತ್ತಿದೆ.  ಆಗಸ್ಟ್ 11 ರಂದು ಮಧ್ಯಾಹ್ನ 3 ಗಂಟೆಗೆ ಶ್ರೀರಂಗಪಟ್ಟಣದ ಮಸ್ಜಿದ್-ಎ-ಅಲಾ ದಿಂದ ಮೆರವಣಿಗೆ ಹೊರಟು ಸಂಜೆ 5 ಗಂಟೆಗೆ ಗಂಜಾಮ್‍ನ ಗುಂಬದ್-ಎ-ಶಾಹಿ ತಲುಪಲಿದೆ. ಸಂಜೆ 7.00 ಗಂಟೆಗೆ ವಿಶೇಷ ಕಾರ್ಯಕ್ರಮಗಳು ಆರಂಭಗೊಂಡು, ಆಗಸ್ಟ್ 12ರ ಮಧ್ಯರಾತ್ರಿಯ ವರೆಗೆ ನಡೆಯಲಿದೆ ಎಂದು ತಿಳಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: