ಮೈಸೂರು

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ ಅವರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಮೈಸೂರು, ಜು.23:- ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ ಅವರ ಮೇಲಿನ ಹಲ್ಲೆ ಖಂಡಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಜಾರ್ಖಂಡ್ ನ ಪಕುರ್ ಹೋಟೆಲ್ ಒಂದರ ಮುಂದೆ ಸಾಮಾಜಿಕ ಕಾರ್ಯಕರ್ತ 80ವರ್ಷದ ಸ್ವಾಮಿ ಅಗ್ನಿವೇಶ ಅವರ ಮೇಲೆ ಕಳೆದ ಮಂಗಳವಾರ ಬೆಳಿಗ್ಗೆ ಬಿಜೆಪಿಗೆ ಸೇರಿದ ಯುವ ಸಂಘಟನೆ ಭಾರತೀಯ ಮೋರ್ಚಾ ಮತ್ತು ಎಬಿವಿಪಿಗೆ ಸೇರಿದವರು ಹಲ್ಲೆ ನಡೆಸಿದ್ದಾರೆ.ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ರೀತಿಯ  ಘಟನೆಗಳು ಅವ್ಯಾಹತ್ವಾಗಿ ನಡೆಯುತ್ತಿವೆ. ಗೋರಕ್ಷಕರು ಮತ್ತು ಹಿಂದುತ್ವ ಪ್ರತಿಪಾದಕರು ಈ ಕೃತ್ಯಗಳನ್ನು ನಡೆಸುತ್ತಿದ್ದರೂ ಮುಂಚೂಣಿಯ ಬಿಜೆಪಿ ನಾಯಕರುಗಳು ತಮಗೆ ಸಂಬಂಧವಿಲ್ಲದಂತೆ ಮಾತನಾಡುತ್ತಾರೆ. ಈ ಎಲ್ಲ ದಾಳಿಗಳು ಮುಸ್ಲಿಮರು, ದಲಿತರು ಮತ್ತು ದಮನಿತರ ಮೇಲೆ ಕೇಂದ್ರೀಕೃತವಾಗಿದೆ. ಇವೆಲ್ಲವೂ ದೇಶಾದ್ಯಂತ ಹಬ್ಬುತ್ತಿರುವ ಹಿಂದೂತ್ವವಾದಿ ಕೋಮುವಾದಿ ಪ್ಯಾಸಿಸಂ ನ ರೂಪಗಳಾಗಿದ್ದು ಇದನ್ನು ನಾವು ಖಂಡಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಒಕ್ಕೂಟದ ನೂರಾರು ಮಂದಿ ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: